ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ‘ಗಣ’ ಚಿತ್ರ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿದ್ದು, ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಇದರ ಟ್ರೈಲರ್ ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, ನೋಡುಗರ ಗಮನ ಸೆಳೆದಿದೆ.
ಈ ಚಿತ್ರವನ್ನು ಚೆರ್ರಿ ಕ್ರಿಯೇಶನ್ಸ್ ಬ್ಯಾನರ್ ನಡಿ ಪಾರ್ಥು ನಿರ್ಮಾಣ ಮಾಡಿದ್ದು, ಪ್ರಜ್ವಲ್ ದೇವರಾಜ್ ಸೇರಿದಂತೆ ಯಶ ಶಿವಕುಮಾರ್, ಕೃಷಿ ತಾಪಂಡ, ಶಿವರಾಜ್ ಕೆ ಆರ್ ಪೇಟೆ, ಸಂಪತ್ ರಾಜ್, ವಿಶಾಲ್ ಹೆಗಡೆ, ರವಿ ಕಾಳೆ. ತಾರಾಂಗಣದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದು, ಸತೀಶ್ ಪೆರ್ಡೂರು ಕಲಾ ನಿರ್ದೇಶನ, ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ರಾಜ್, ಥ್ರಿಲ್ಲರ್ ಮಂಜು, ಹಾಗೂ ಮಾಸ್ ಮಾಧ ಅವರ ಸಾಹಸ ನಿರ್ದೇಶನವಿದೆ.