ನವದೆಹಲಿ: ಏಕೀಕೃತ ಪಿಂಚಣಿ ಯೋಜನೆ ಅನುಷ್ಠಾನದ ಕುರಿತು ಭಾರತ ಸರ್ಕಾರದ 25ನೇ ಜನವರಿ 2025 ರ ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿದೆ.
ಪಿಂಚಣಿಗಾಗಿ Bench Mark Corpus ಅಂತ ಒಂದನ್ನು ಶುರು ಮಾಡಿದ್ದಾರೆ. ಅದರ ಮೇಲೆ ಪೆನ್ಷನ್ ಡಿಸೈಡ್ ಆಗ್ತದೆ. ಅದನ್ನು ನಿರ್ಧರಿಸುವವರು PFRDA.
ಸ್ವಯಂ ನಿವೃತ್ತಿ UPS ನಲ್ಲೂ ಅನ್ವಯ. 25 ವರ್ಷ qualified service ಆಗಿರಲೇಬೇಕು. ಆದರೆ ಪೆನ್ಷನ್ ಶುರು ಆಗುವುದು ಮಾತ್ರ ಅವರಿಗೆ 60 ವರ್ಷ ಆದ ಬಳಿಕ.
ಕನಿಷ್ಠ 10 ವರ್ಷ ಸೇವೆ ಪೂರ್ಣವಾಗಿ ನಿವೃತ್ತರಾದರೆ ಮಾತ್ರ UPS ಅನ್ವಯ.
ಈಗಿರುವಂತೆ ನಮ್ಮ ವೇತನದಿಂದ 10% NPS ಬದಲಿಗೆ UPS ಗೆ ಕಡಿತವಾಗಲಿದೆ.
ಈಗಾಗಲೇ ಇರುವ nps ಫಂಡನ್ನು UPS ಗೆ ವರ್ಗಾಯಿಸಲಾಗುತ್ತದೆ.
ಒಮ್ಮೆ UPS ಆಯ್ಕೆ ಮಾಡಿದರೆ ಮತ್ತೆ NPS ಗೆ ಹಿಂದಿರುಗಲು ಆಯ್ಕೆ ಇಲ್ಲ
ಸದ್ಯಕ್ಕೆ NPS OR UPS ಆಯ್ಕೆಗೆ ಯಾವುದೇ ದಿನಾಂಕ ಅಂತಿಮಗೊಳಿಸಿಲ್ಲ
ಗ್ರಾಚ್ಯುಟಿ ರೀತಿಯಲ್ಲೇ ಇನ್ನೊಂದು ಬಗೆಯ ದೊಡ್ಡ ಮೊತ್ತ ವು ನಿವೃತ್ತಿಯ ಸಮಯದಲ್ಲಿ ಸಿಗಲಿದೆ. ಇದು ಗ್ರ್ಯಾಚ್ಯುಟಿಗೆ ಬದಲಾಗಿ ಸಿಗಲಿದೆಯೇ ಅಥವಾ ಗ್ರಾಚ್ಯುಟಿಯ ಜೊತೆಗೆ ಹೆಚ್ಚುವರಿಯಾಗಿ ಸಿಗಲಿದೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ!
ಈಗಾಗಲೇ NPS ಪದ್ಧತಿಯಲ್ಲಿ ನಿವೃತ್ತರಾಗಿರುವ, ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರುವವರಿಗೂ ಇದು ಅನ್ವಯ. ಕನಿಷ್ಠ ಪಿಂಚಣಿ 10000 + DA.
ಈ ಹೊಸ ಪದ್ಧತಿ ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆ.