ಬೆಂಗಳೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಅಪಘಾತ ವಿಮೆ ವಯೋಮಿತಿ ಏರಿಕೆ ಮಾಡಲಾಗಿದೆ. ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ವಿಶೇಷ ಅಪಘಾತ ವಿಮಾ ಯೋಜನೆಯ ವಯೋಮಿತಿ ಹೆಚ್ಚಳ ಮಾಡಲಾಗಿದೆ. 16ರಿಂದ 59 ವರ್ಷದವರೆಗೆ ಇದ್ದ ಯೋಜನೆಯನ್ನು ಈಗ 16 ರಿಂದ 70 ವರ್ಷದವರೆಗೆ ಹೆಚ್ಚಳ ಮಾಡಲಾಗಿದೆ.
https://ambedkarsahayahasta.karnataka.gov.in ವೆಬ್ಸೈಟ್ ಮೂಲಕ ನಂದಣಿ ಮಾಡಿಕೊಳ್ಳಬಹುದಾಗಿದೆ. ಅಪಘಾತದಲ್ಲಿ ಮೃತಪಟ್ಟಲ್ಲಿ ಎರಡು ಲಕ್ಷ ರೂಪಾಯಿ, ಅಪಘಾತದಲ್ಲಿ ಅಂಗವೈಕಲ್ಯ ಉಂಟಾದರೆ ಅಪಘಾತದ ತೀವ್ರತೆಗೆ ಅನುಗುಣವಾಗಿ ಎರಡು ಲಕ್ಷ ರೂ.ವರೆಗೂ ಪರಿಹಾರ ನೀಡಲಾಗುವುದು. ಗಂಭೀರ ಕಾಯಿಲೆಗಳಿಗೆ 1 ಲಕ್ಷ ರೂಪಾಯಿವರೆಗೆ ಪರಿಹಾರವನ್ನು ಸರ್ಕಾರ ನೀಡಲಿದೆ.
ರಾಜ್ಯದ ಪತ್ರಿಕ ವಿತರಕರು ಈ ಯೋಜನೆಯಡಿ ನೋಂದಣಿ ಮಾಡಿಕೊಂಡು ಸರ್ಕಾರದ ಸೌಲಭ್ಯ ಪಡೆಯುವಂತೆ ಕರ್ನಾಟಕ ರಾಜ್ಯಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಶಂಭುಲಿಂಗ ಕೋರಿದ್ದಾರೆ.