ಉಡುಪಿ : ರಾಜ್ಯದಲ್ಲಿ ಮತ್ತೊಂದು ಹೀನ ಕೃತ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದ್ದು, ಚಾಕೊಲೇಟ್ ಆಮಿಷವೊಡ್ಡಿ 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
5 ವರ್ಷದ ಬಾಲಕಿ ಸಂಬಂಧಿಕರೊಬ್ಬರ ಅಂಗಡಿ ಬಳಿ ಆಟವಾಡುತ್ತಿದ್ದಾಗ ಅಲ್ಲಿಗೆ ಬಂದ ಕಾಮುಕನೋರ್ವ ಚಾಕೊಲೇಟ್ ಆಮಿಷವೊಡ್ಡಿ ಕರೆದುಕೊಂಡು ಹೋಗಿದ್ದಾನೆ.
ಖಾಸಗಿ ಅಂಗ ಮುಟ್ಟುವ ವೇಳೆ ಬಾಲಕಿ ಕಿರುಚಿಕೊಂಡಿದ್ದು, ಆರೋಪಿ ಹೆದರಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.ಘಟನೆ ಕುರಿತು ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.