ಬೆಂಗಳೂರು : ಜ.26 ರಂದು ನಾಳೆ ನಮ್ಮ ಮೆಟ್ರೋ ಸಂಚಾರ 1 ಗಂಟೆ ಬೇಗ ಆರಂಭವಾಗಲಿದೆ.ಹೌದು. ಭಾನುವಾರ ಬೆಳಗ್ಗೆ 7 ಗಂಟೆ ಬದಲು 1 ಗಂಟೆ ಮುಂಚಿತವಾಗಿ 6 ಗಂಟೆಗೆ ಆರಂಭವಾಗಲಿದೆ.
ಲಾಲ್ ಭಾಗ್ ಫ್ಲವರ್ ಶೋ ವೀಕ್ಷಣೆಗೆ ತೆರಳುವವರು ಈ ಸೌಲಭ್ಯ ಪಡೆಯಬಹುದಾಗಿದೆ. ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಹೆಚ್ಚುವರಿ ಮೆಟ್ರೋ ರೈಲುಗಳ ಸಂಚಾರ ಇರಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆ ಹೊರಡಿಸಿದೆ.
ಲಾಲ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆವರೆಗೆ ಟೋಕನ್ ಬದಲಿಗೆ ಪೇಪರ್ ಟಿಕೆಟ್ ನೀಡಲಾಗುತ್ತದೆ. ಈ ಪೇಪರ್ ಟಿಕೆಟ್ ಮೂಲಕ ಲಾಲ್ ಬಾಗ್ ನಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಬಹುದಾಗಿದೆ.