ತಾಯಿ ಹತ್ತು ಕೆಜಿ ಅಕ್ಕಿ ಕೊಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಮಗ ಕೊಡಲಿಯಿಂದ ತಾಯಿಯನ್ನೇ ಹತ್ಯೆಗೈದ ಘಟನೆ ಒಡಿಶಾದಲ್ಲಿ ನಡೆದಿದೆ.
ರಾಯ್ಬರಿ ಸಿಂಗ್ ಕೊಲೆಯಾದ ಮಹಿಳೆ. ರೋಹಿದಾಸ್ ಸಿಂಗ್ ತಾಯಿಯನ್ನೇ ಕೊಂದ ಮಗ. ರೋಹಿದಾಸ್ ಹಾಗೂ ಸಹ್ದರ ಲಕ್ಷ್ಮೀಕಾಂತ್ ಸಿಂಗ್ ನಡುವೆ ಜಗಳ ನಡೆದಿತ್ತು. ರೋಹಿದಾಸ್, ಹತ್ತು ಕೆಜಿ ಅಕ್ಕಿ ಕೊಡುವಂತೆ ತಾಯಿಗೆ ಕೇಳಿದ್ದ. ಅದಕ್ಕೆ ತಾಯಿ ನಿರಾಕರಿಸಿದ್ದರು. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಕೋಪದ ಬರದಲ್ಲಿ ರೋಹಿದಾಸ್ ಹರಿಅವಾದ ಆಯುಧದಿಂದ ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ.
ಗಂಭೀರವಾಗಿ ಹಲ್ಲೆಗೊಳಗಾದ ತಾಯಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ತಾಹಿ ಮೇಲೆ ಹಲ್ಲೆ ನಡೆಸಿದ ಬಳಿಕ ರೋಹಿದಾಸ್ ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಪಿಆರ್ ಎಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಆಯುಧವನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.