alex Certify ವಸತಿ ರಹಿತ ನಿರಾಶ್ರಿತರಿಗೆ ಆಶ್ರಯ ಕೇಂದ್ರ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಸತಿ ರಹಿತ ನಿರಾಶ್ರಿತರಿಗೆ ಆಶ್ರಯ ಕೇಂದ್ರ ಆರಂಭ

ಬಳ್ಳಾರಿ : ಬಳ್ಳಾರಿ ಮಹಾನಗರ ಪಾಲಿಕೆಯ ಡೇ-ನಲ್ಮ್ ಯೋಜನೆಯ ವಸತಿ ರಹಿತರಿಗೆ ಆಶ್ರಯ ಉಪಘಟಕದಡಿ ಬಳ್ಳಾರಿ ನಗರದ ವ್ಯಾಪ್ತಿಯಲ್ಲಿ ವಿವಿಧೆಡೆ 4 ವಸತಿ ರಹಿತ ನಿರಾಶ್ರಿತರಿಗೆ ಆಶ್ರಯ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

ಆಶ್ರಯ ಕೇಂದ್ರಗಳಲ್ಲಿ ಪುರುಷ ಹಾಗೂ ಮಹಿಳಾ ನಿರಾಶ್ರಿತರಿಗೆ ಪ್ರತ್ಯೇಕ ಕೊಠಡಿ, ನಿರಾಶ್ರಿತರಿಗೆ ಆಶ್ರಯ ಸೌಲಭ್ಯ ಹಾಗೂ ಮೂಲಭೂತ ಸೌಕರ್ಯಗಳಾದ ಕಾಟ್, ತಲೆದಿಂಬು, ಪ್ಲೇಟ್, ಕುಡಿಯುವ ನೀರು, ಮನೋರಂಜನೆಗಾಗಿ ಟಿವಿ, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಶ್ರಯ ಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿರುವ ಸಂಸ್ಥೆಯ ಸಿಬ್ಬಂದಿಗಳು ಪ್ರತಿ 15 ದಿನಗಳಿಗೊಮ್ಮೆ ಬಸ್ಸ್ಟಾö್ಯಂಡ್, ರೈಲ್ವೇ ನಿಲ್ದಾಣ ಹಾಗೂ ರಸ್ತೆ ಬದಿಗಳಲ್ಲಿ ರ್ಯಾಪಿಡ್ ಸರ್ವೇ ಕೈಗೊಂಡು ನಿರಾಶ್ರಿತರನ್ನು ಗುರುತಿಸಿ ಆಶ್ರಯ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಕ್ರಮ ವಹಿಸುತ್ತಾರೆ.

ಪ್ರತಿ ತಿಂಗಳು ಕೇಂದ್ರದಲ್ಲಿ ನಿರಾಶ್ರಿತರಿಗೆ ಸರ್ಕಾರಿ ವೈದ್ಯರ ಮೂಲಕ ಆರೋಗ್ಯ ತಪಾಸಣೆ, ಕೇಂದ್ರದಲ್ಲಿ ನಿರಾಶ್ರಿತರಿಗೆ ಅವಶ್ಯಕತೆ ಇದ್ದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೃದ್ದರಿಗೆ, ಅಂಗವಿಕಲರಿಗೆ ಹಾಗೂ ವಿಧವೆಯರಿಗೆ ಮಾಸಾಶನ ಸೌಲಭ್ಯ ಹಾಗೂ ಬ್ಯಾಂಕ್ಗಳ ಮೂಲಕ ವಿಮೆ ಸೌಲಭ್ಯ ಸಹ ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

*ಆಶ್ರಯ ಕೇಂದ್ರಗಳ ವಿವರ

ನಗರದ ಕೋಟೆ ಪ್ರದೇಶದ 34 ನೇ ವಾರ್ಡ್ನ ತಾಪಂ ಹತ್ತಿರದ ವಸತಿ ರಹಿತ ಆಶ್ರಯ ಕೇಂದ್ರದ ವ್ಯವಸ್ಥಾಪಕ ಧನುಂಜಯ (ಮೊ.9916221171).
ಅನಂತಪುರ ರಸ್ತೆಯ ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿನ ವಸತಿ ರಹಿತ ಆಶ್ರಯ ಕೇಂದ್ರದ ವ್ಯವಸ್ಥಾಪಕ ನವೀನ್ (ಮೊ.7975615467).
ವಿದ್ಯಾನಗರದ ವಿಮ್ಸ್ ಆಸ್ಪತ್ರೆ ಆವರಣ ಕಟ್ಟಡದ ವಸತಿ ರಹಿತ ಆಶ್ರಯ ಕೇಂದ್ರದ ವ್ಯವಸ್ಥಾಪಕ ಪ್ರವೀಣ್ ಕುಮಾರ್ (ಮೊ.9113526634).
ಎಪಿಎಂಸಿ ಹತ್ತಿರದ ಬಂಡಿಮೋಟ್ ಪ್ರದೇಶದ ವಸತಿ ರಹಿತ ಆಶ್ರಯ ಕೇಂದ್ರದ ವ್ಯವಸ್ಥಾಪಕ ಸುರೇಶ್ (ಮೊ.9535717004), ಇವರನ್ನು ಸಂಪರ್ಕಿಸಬಹುದು.
ವಸತಿ ರಹಿತ ಆಶ್ರಯ ಕೇಂದ್ರಗಳಿಗೆ ಕಳೆದ 2024ರ ಡಿಸೆಂಬರ್ ಮಾಹೆಯಲ್ಲಿ ಜಿಲ್ಲಾ ನಗರಾಭಿವೃದ್ದಿ ಕೋಶ ಕಾರ್ಯಾಲಯದ ಯೋಜನಾ ನಿರ್ದೇಶಕ ರಾಘವೇಂದ್ರ ಗುರು, ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ ಪ್ರಾಣೇಶ್, ಜಿಲ್ಲಾ ಅಭಿಯಾನ ವ್ಯವಸ್ಥಾಪಕರಾದ ಸೌಮ್ಯ.ಎಸ್., ಬಳ್ಳಾರಿ ಮಹಾನಗರ ಪಾಲಿಕೆಯ ಸಮುದಾಯ ಸಂಘಟಕರಾದ ಸಿ.ಎನ್.ಪುಷ್ಪಲತಾ ಹಾಗೂ ಮಲ್ಟಿ ಟಾಸ್ಕಿಂಗ್ ಅಫೀಷಿಯಲ್ಸ್ ಚನ್ನಬಸವನಗೌಡ ಅವರು ಭೇಟಿ ನೀಡಿ ಕೇಂದ್ರಗಳ ನಿರ್ವಹಣೆ ಪರಿಶೀಲಿಸಿ ಕೇಂದ್ರಗಳ ನಿರ್ವಹಣಾ ಸಂಸ್ಥೆಯ ಮ್ಯಾನೇಜರ್ ಹಾಗೂ ಕೇರ್ಟೇರ್ಸ್ ಗಳಿಗೆ ನಿರ್ದೇಶನ ನೀಡಿದ್ದಾರೆ.

ಯಾರಾದರೂ ನಿರಾಶ್ರಿತರು ರಸ್ತೆಯ ಬದಿ, ಬಸ್ ಸ್ಟ್ರ್ಯಾಂಡ್, ರೈಲ್ವೇ ನಿಲ್ದಾಣಗಳಲ್ಲಿ ಮಲಗಿರುವುದು ಕಂಡುಬಂದಲ್ಲಿ ಸಾರ್ವಜನಿಕರು ಆಶ್ರಯ ಕೇಂದ್ರಗಳ ವ್ಯವಸ್ಥಾಪಕರಿಗೆ ಸಂಪರ್ಕಿಸಿ ನಿರಾಶ್ರಿತರಿಗೆ ಅವಶ್ಯಕವಿರುವ ಆಶ್ರಯ ಸೌಲಭ್ಯದ ಬಗ್ಗೆ ಮಾಹಿತಿ ನೀಡಬೇಕು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...