ಬೆಳಗಾವಿ: ರಾಜ್ಯದಲ್ಲಿ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಜನರು ಸಾವಿಗೆ ಶರಣಾಗುತ್ತಿದ್ದಾರೆ. ದಿನಕ್ಕೊಂದು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಫೈನಾನ್ಸ್ ನವರ ಕಿರುಕುಳದಿಂದ ನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಯಮಲಾಪುರದಲ್ಲಿ ಈ ಘಟನೆ ನಡೆದಿದೆ. ಹುಕ್ಕೇರಿ ತಾಲೂಕಿನ ಶಿರೂರು ಮೂಲದ 52 ವರ್ಷದ ಸರೋಜಾ ಕಿರಬಿ ಆತ್ಮಹತ್ಯೆಗೆ ಶರಣಾದವರು. ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೊಳೆಪ್ಪ ದಡ್ಡಿ ಎಂಬಾತ ಮಹಿಳೆಗೆ 2.30 ಲಕ್ಷ ರೂಪಾಯಿ ಸಾಲ ಕೊಡಿಸಿದ್ದ. ಬಳಿಕ ಸರೋಜಾ ಹೊಳೆಪ್ಪನಿಗೆ ಅರ್ಧದಷ್ಟು ಸಾಲ ಮರುಪಾವತಿ ಮಾಡಿದ್ದರು. ಆದರೆ ಒಂದೇ ಸಲ ಪೂರ್ತಿ ಸಾಲ ಕಟ್ಟಬೇಕು ಎಂದು ಫೈನಾನ್ಸ್ ನವರಿ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.