ಪಂಜಾಬ್‌ನ ಲೂಧಿಯಾನದ ಎಕಜೋಟ್ ನಗರದಲ್ಲಿ ನಡೆದ ಒಂದು ಆಘಾತಕಾರಿ ಘಟನೆಯಲ್ಲಿ, ಓರ್ವ ಮಹಿಳೆ ಮತ್ತು ಅವರ ಮೂವರು ಹೆಣ್ಣು ಮಕ್ಕಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಕಪ್ಪು ಮಸಿ ಬಳಿದು ಮೆರವಣಿಗೆ ಮಾಡಲಾಗಿದೆ.
ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ ಮತ್ತು ಅವರ ಮಕ್ಕಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಕಾರ್ಖಾನೆಯ ಮಾಲೀಕ ಪರವೀಂದರ್ ಸಿಂಗ್ ಮತ್ತು ಅವನ ಸಹಚರರು ಈ ಕೃತ್ಯ ನಡೆಸಿದ್ದಾರೆ. ಅವರು ಮಹಿಳೆಯ ಮುಖಕ್ಕೆ ಕಪ್ಪು ಮಸಿ ಬಳಿದು, ಕುತ್ತಿಗೆಗೆ “ನಾನು ಕಳ್ಳಿ, ನಾನು ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ” ಎಂಬ ಫಲಕವನ್ನು ಹಾಕಿ, ಕೈ ಕಟ್ಟಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ.
ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಜನರು ಈ ಮಹಿಳೆ ಮತ್ತು ಅವರ ಮಕ್ಕಳನ್ನು ಹೊಡೆಯುವಂತೆ ಕೂಗುತ್ತಿರುವುದು ಕೇಳಬಹುದಾಗಿದೆ. ಆದರೆ ಸಾರ್ವಜನಿಕರ್ಯಾರು ಅವರ ರಕ್ಷಣೆಗೆ ಬಂದಿಲ್ಲ.
ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರಾಜ್ ಲಾಲಿ ಗಿಲ್, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಲುಧಿಯಾನದ ಪೊಲೀಸ್ ಆಯುಕ್ತರಿಗೆ ನೋಟಿಸ್ ನೀಡಿ, ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
Ludhiana, Punjab: In Ludhiana, a mother and her three daughters were humiliated for allegedly stealing clothes from a factory. They were forced to wear ‘thief’ posters, their faces blackened, and a viral video sparked outrage pic.twitter.com/B2ja2OBbOQ
— IANS (@ians_india) January 22, 2025