ಬೆಂಗಳೂರು : SATS ತಂತ್ರಾಂಶದಲ್ಲಿ ಶಾಲಾ ವಿದ್ಯಾರ್ಥಿಗಳ ಆಧಾರ್ ಮೌಲೀಕರಣ ಮಾಡುವಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ್ ಮೌಲೀಕರಣ ಸಂಬಂಧಿಸಿದ ಕಾರ್ಯಗಳನ್ನು ತುರ್ತಾಗಿ ಪೂರ್ಣಗೊಳಿಸುವ ಕುರಿತು ಸುತ್ತೋಲೆ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಮಾರು 2 ವರ್ಷಗಳಿಂದ SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ್ ಮೌಲೀಕರಣವನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಇದುವರೆಗೂ ರಾಜ್ಯದಲ್ಲಿ ಒಟ್ಟಾರೆ 1.04 ಕೋಟಿ ವಿದ್ಯಾರ್ಥಿಗಳಲ್ಲಿ 78 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕಣ ಮಾತ್ರ ಯಶಸ್ವಿಯಾಗಿ ಪೂರ್ಣಗೊಂಡಿರುತ್ತದೆ. 18 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕರಣ ಇದುವರೆಗೂ ತಂತ್ರಾಂಶದಲ್ಲಿ ಮೌಲೀಕರಿಸಲಾಗಿರುವುದಿಲ್ಲ. ಹಾಗೂ ಸುಮಾರು 8 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕರಿಸಲಾಗಿದ್ದರು ಆಧಾರ್ ಮತ್ತು SATS ನಲ್ಲಿ ವಿದ್ಯಾರ್ಥಿಯ ಹೆಸರು ತಾಳೆಯಾಗದ ಕಾರಣ ಮೌಲೀಕರಣ ವಿಫಲವೆಂದು ಪರಿಗಣಿಸಲಾಗಿದೆ. ಈ ಅಂತರವನ್ನು ಪೂರ್ಣಗೊಳಿಸಲು ಉಲ್ಲೇಖ-4 ರ ಈ ಕಚೇರಿಯ ಸುತ್ತೋಲೆಯಲ್ಲಿ ಶಾಲೆಗಳಲ್ಲಿ ವಿಶಿಷ್ಟ ಆಧಾರ್ ಶಿಬಿರಗಳನ್ನು ಹಮ್ಮಿಕೊಳ್ಳಲು ತಿಳಿಸಲಾಗಿರುತ್ತದೆ.
ಇದುವರೆಗೂ ಒಟ್ಟಾರೆ 26 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕರಣ ತಂತ್ರಾಂಶದಲ್ಲಿ ಬಾಕಿಯಿರುವುದರಿಂದ, ವಿವಿಧ ಇಲಾಖೆಯ ವಿದ್ಯಾರ್ಥಿವೇತನ ಮತ್ತು ಇತರೆ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯುಂಟಾಗುತ್ತಿದೆ. ಸದರಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ವಿಳಂಬವಾಗಿರುವುದು ಇಲಾಖೆಗೆ ವಿವಿಧ ಸಂದರ್ಭಗಳಲ್ಲಿ ಮುಜುಗರ ಉಂಟಾಗಿರುತ್ತದೆ. ಆದ್ದರಿಂದ ಇದಕ್ಕೆ ಕಾರಣವಾದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಪರಿಗಣಿಸಲಾಗಿದೆ. ಕೊನೆಯ ಅವಕಾಶವಾಗಿ ಇಂದಿನಿಂದ ಮುಂದಿನ 7 ದಿನಗಳವರೆಗೆ ಅವಕಾಶ ನೀಡಿ ಈ ಕೆಳಗಿನಂತೆ ತುರ್ತಾಗಿ ಕ್ರಮವಹಿಸಲು ಆದೇಶಿಸಿದೆ.