ಅಮ್ರೋಹಾ: ಅತ್ತೆ ತನ್ನ ಸೊಸೆಯ ಪ್ರೇಮಿಯನ್ನು ಉಪಾಯದಿಂದ ಬಲೆ ಬೀಸಿ ಹಿಡಿದು ಚಪ್ಪಲಿಯಿಂದ ಥಳಿಸಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ, ಮಗ ಕೆಲಸಕ್ಕೆ ಹೋದಾಗ, ಅವನ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಫೇಸ್‌ಬುಕ್‌ನಲ್ಲಿ ಚಾಟ್ ಮಾಡುತ್ತಿದ್ದಳು. ಅತ್ತೆಗೆ ತನ್ನ ಸೊಸೆಯ ನಡವಳಿಕೆಯನ್ನು ಗಮನಿಸಿದಾಗ ಅನುಮಾನ ಬಂದಿದೆ.
ಅತ್ತೆ ತನ್ನ ಸೊಸೆಯ ಫೋನ್‌ನಲ್ಲಿ ಚಾಟ್‌ಗಳನ್ನು ಓದಿದಾಗ ಆಕೆ ಮತ್ತೊಬ್ಬನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ ಎಂಬ ಸಂಗತಿ ತಿಳಿದುಬಂದಿದೆ. ಆಗ ಉಪಾಯವಾಗಿ ಅದೇ ಫೋನ್ ನಿಂದ ಸೊಸೆಯ ಪ್ರಿಯಕರನಿಗೆ ಭೇಟಿಯಾಗುವಂತೆ ತನ್ನ ಸೊಸೆ ಕಳುಹಿಸಿದಂತೆಯೇ ಅತ್ತೆ ಸಂದೇಶ ಕಳುಹಿಸಿದ್ದಾರೆ.
ಭಾನುವಾರ, ಗಜ್ರೌಲಾದ ಇಂದ್ರ ಚೌಕದಲ್ಲಿ, ತನ್ನ ಸಂದೇಶ ಓದಿ ಸ್ಥಳಕ್ಕೆ ಬಂದ ಸೊಸೆಯ ಪ್ರಿಯಕರನೆನ್ನಲಾದ ಯುವಕನಿಗೆ ಅತ್ತೆ ಚಪ್ಪಲಿಯಿಂದ ಹೊಡೆದಿದ್ದಾರೆ.
ಈ ಘಟನೆಯು ಗಮನ ಸೆಳೆದಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆದಾಗ್ಯೂ, ಅವರು ಘಟನಾ ಸ್ಥಳಕ್ಕೆ ಆಗಮಿಸುವ ವೇಳೆಗೆ, ಇಬ್ಬರೂ ಪರಾರಿಯಾಗಿದ್ದರು, ಇದರಿಂದಾಗಿ ಅಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ.