ಟಾಲಿವುಡ್‌ನ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರಾದ ದಿಲ್ ರಾಜು ಅವರ ಮನೆ ಮತ್ತು ಕಚೇರಿ ಸೇರಿದಂತೆ ಹಲವು ಆಸ್ತಿಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿದೆ.
ದಿಲ್ ರಾಜು ಅವರ ನಿವ್ವಳ ಆಸ್ತಿಯು ಸುಮಾರು 2000 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಅವರು ಹಲವು ಐಷಾರಾಮಿ ಕಾರುಗಳು, ಜುಬ್ಲಿ ಹಿಲ್ಸ್‌ನಲ್ಲಿ ಐಷಾರಾಮಿ ಬಂಗಲೆ, ರೆಸಾರ್ಟ್‌ಗಳು ಮತ್ತು ನಿಜಾಮ ಪ್ರದೇಶದಲ್ಲಿ 40 ಚಿತ್ರಮಂದಿರಗಳ ಮಾಲೀಕರಾಗಿದ್ದಾರೆ.
ದಿಲ್ ರಾಜು ಅವರು ನಿರ್ಮಿಸಿದ ‘ಗೇಮ್ ಚೇಂಜರ್’, ‘ಸಂಕ್ರಾಂತಿಕಿ ವಸ್ತುನಮ್’ ಸೇರಿದಂತೆ ಹಲವು ಚಿತ್ರಗಳು ಯಶಸ್ಸು ಕಂಡಿದ್ದವು.
ಐಟಿ ಇಲಾಖೆ ದಾಳಿಯ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ತೆರಿಗೆ ವಂಚನೆ ಆರೋಪದ ಮೇಲೆ ಈ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ.