ಉತ್ತರ ಪ್ರದೇಶದ ಎಟಾಹ್ ಜಿಲ್ಲೆಯ ಜಿಐಐಸಿ ಕಾಲೋನಿಯಲ್ಲಿ ಆಘಾತಕಾರಿ ಘಟನೆ ನಡೆದಿದ್ದು, 9 ವರ್ಷದ ಬಾಲಕ ಭಯದಿಂದ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ.
ರಾಜು ಎಂಬುವವರ ಮಗ ಆರ್ಯನ್ ಮನೆಯಲ್ಲಿ ಊಟ ಮಾಡುತ್ತಿದ್ದ ವೇಳೆ ರೊಟ್ಟಿಯ ತುಂಡನ್ನು ತೆಗೆದುಕೊಂಡು ಇತರ ಮಕ್ಕಳು ಆಡುತ್ತಿದ್ದ ಕೋಣೆಗೆ ಹೋಗಿ ಅವರೊಂದಿಗೆ ಆಡಲು ಪ್ರಾರಂಭಿಸಿದ್ದಾನೆ.
ಕೆಲವು ಸಮಯದ ನಂತರ, ಎಲ್ಲಾ ಮಕ್ಕಳು ಅಲ್ಲಿಂದ ಹೊರಟುಹೋಗಿದ್ದು, ಆದರೆ 6 ವರ್ಷದ ಬಾಲಕಿ ಬಾಗಿಲನ್ನು ಸ್ವಲ್ಪ ಮುಚ್ಚಿ ಅವನನ್ನು ಹೆದರಿಸಲು ಹಠಾತ್ ಶಬ್ದ ಮಾಡಿದ್ದಾಳೆ. ಆರ್ಯನ್ ಈ ಶಬ್ದ ಕೇಳುತ್ತಿದ್ದಂತೆ ನೆಲಕ್ಕೆ ಬಿದ್ದು ಪ್ರಜ್ಞಾಹೀನನಾಗಿದ್ದಾನೆ.
ಕುಟುಂಬದವರು ತಕ್ಷಣವೇ ಆರ್ಯನ್‌ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದು, ಆದರೆ ವೈದ್ಯರು ಆತ ಈಗಾಗಲೇ ಮೃತಪಟ್ಟಿದ್ದಾನೆ ಎಂದು ಮೃತ ಘೋಷಿಸಿದ್ದಾರೆ. ವೈದ್ಯರ ಪ್ರಕಾರ, ಹೃದಯಾಘಾತದಿಂದಾಗಿ ಮಗು ಮೃತಪಟ್ಟಿದೆ. ಈ ಘಟನೆಯು ಕುಟುಂಬಕ್ಕೆ ಮಾತ್ರವಲ್ಲದೆ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಅಂತಹ ಘಟನೆಯಿಂದ ಹೃದಯಾಘಾತ ಸಂಭವಿಸುವುದು ಅತ್ಯಂತ ಅಪರೂಪ ಎಂದು ವೈದ್ಯರು ಹೇಳಿದ್ದಾರೆ.