ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪಟ್ಟಣದಲ್ಲಿಯೂ ದರೋಡೆ ಗ್ಯಾಂಗ್ ಪ್ರತ್ಯಕ್ಷವಾಗಿದೆ. ದರೋಡೆಕೋರರು ಬ್ಯಾಂಕ್ ನಿಂದ ಡ್ರಾ ಮಾಡಿ ತರುತ್ತಿದ್ದ ಎರಡು ಲಕ್ಷ ರೂಪಾಯಿ ಹಣ ದೋಚಿದ್ದಾರೆ.
ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಹಣ ಕದ್ದು ಪರಾರಿಯಾಗಿದ್ದಾರೆ. ಸಿದ್ದಲಿಂಗಯ್ಯ ಎಂಬುವರ ಸ್ಕೂಟಿಯಲ್ಲಿ ಇಟ್ಟಿದ್ದ ಎರಡು ಲಕ್ಷ ರೂಪಾಯಿ ಎಗರಿಸಿ ಪರಾರಿಯಾಗಿದ್ದಾರೆ.
ಬ್ಯಾಂಕಿನಲ್ಲಿ ಗ್ರಾಹಕರ ರೀತಿ ಕುಳಿತಿದ್ದ ಕಳ್ಳರ ಗ್ಯಾಂಗ್ ಹಣ ಡ್ರಾ ಮಾಡಿಕೊಂಡು ಬರುವಾಗ ಪಲ್ಸರ್ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಕೃತ್ಯವೆಸಗಿದ್ದಾರೆ. ಇಂದಿರಾ ನಗರದಲ್ಲಿ ಸ್ಕೂಟಿ ನಿಲ್ಲಿಸಿದ್ದಾಗ ಹಣ ಕಳವು ಮಾಡಿದ್ದಾರೆ. ಖದೀಮರು ಹಣ ಎಗರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.