ಬೆಂಗಳೂರು: ಎಂಎಲ್ ಎ ಶರವಣ ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ ಚಿನ್ನ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮ್ಯಾನೇಜರ್ ಭೀಮರಾಜ್ 1ಕೆಜಿ 249 ಗ್ರಾಂ ಚಿನ್ನದ ಆಭರಣವನ್ನು ಹಾಲ್ ಮಾರ್ಕ್ ಹಾಕಲು ನಗರ್ತಪೇಟೆ ಅಂಗಡಿಗೆ ಕೊಟ್ಟಿದ್ದರು. ಆದರೆ ಈಗ ಚಿನ್ನ ಕಳುವಾಗಿದೆ ಎಂದು ತಿಳಿದುಬಂದಿದೆ.
ನಗರ್ತಪೇಟೆಯಲ್ಲಿರುವ ಕೊನಾರ್ಕ್ ಹಾಲ್ ಮಾರ್ಕ್ ಸೆಂಟರ್ ಗೆ ಚಿನ್ನ ಕೊಡಲಾಗಿತ್ತು. ಆದರೆ ಈಗ ಸಿನ್ನ ನಾಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾಯಿ ಗೋಲ್ಡ್ ಪ್ಯಾಲೇಸ್ ಮ್ಯಾನೇಜರ್ ಭೀಮರಾಜ್ ಹಾಗೂ ಕೊನಾರ್ಕ್ ಹಾಲ್ ಮಾರ್ಕ್ ಸೆಂಟರ್ ಮಾಲೀಕ ಭರತ್ ಚಟದ್ ವಿರುದ್ಧ ದೂರು ದಾಖಲಾಗಿದೆ.
ಹಾಲ್ ಮಾರ್ಕ್ ಸೆಂಟರ್ ಮಾಲೀಕ ಭರತ್, ನಮ್ಮ ಕೆಲಸಗಾರ ಚಿನ್ನ ಕಳ್ಳತನ ಮಾಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.