ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಬರುವ ಭಕ್ತರು ಇಷ್ಟಾರ್ಥ ಸಿದ್ಧಿಗೆ ಹರಕೆ ತೀರಿಸುತ್ತಾರೆ.
ಹೀಗೆ ಚೆನ್ನೈ ಭಕ್ತರೊಬ್ಬರು ತಿರುಮಲ ವೆಂಕಟೇಶ್ವರ ಸ್ವಾಮಿ ಸನ್ನಿಧಿಗೆ 6 ಕೋಟಿ ದೇಣಿಗೆ ಅರ್ಪಿಸಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಗೆ ಚೆನ್ನೈನ ವರ್ಧಮಾನ ಜೈನ್ ಎಂಬುವರು 6 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಟಿಟಿಡಿಯ ಶ್ರೀ ವೆಂಕಟೇಶ್ವರ ಭಕ್ತಿ ವಾಹಿನಿಗೆ 5 ಕೋಟಿ ರೂಪಾಯಿ, ಶ್ರೀ ವೆಂಕಟೇಶ್ವರ ಗೋ ಸಂರಕ್ಷಣಾ ಟ್ರಸ್ಟ್ ಗೆ 1 ಕೋಟಿ ರೂ. ನೀಡಿದ್ದಾರೆ. 6 ಕೋಟಿ ರೂ. ಮೊತ್ತದ ಡಿಡಿಗಳನ್ನು ಟಿಟಿಡಿ ಅಧಿಕಾರಿ ವೆಂಕಯ್ಯ ಚೌಧರಿ ಅವರಿಗೆ ಹಸ್ತಾಂತರ ಮಾಡಿದ್ದಾರೆ.