ವಿಜಯಪುರ: ತೊಗರಿ ಕ್ವಿಂಟಲ್ ಗೆ ಹೆಚ್ಚುವರಿಯಾಗಿ 450 ರೂ. ಬೆಂಬಲ ಬೆಲೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 140 ಕೋಟಿ ರೂಪಾಯಿ ನೀಡುವುದಾಗಿ ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಘೋಷಿಸಿದ್ದಾರೆ.
ವಿಜಯಪುರದಲ್ಲಿ ಸೋಮವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರೊಂದಿಗೆ ಚರ್ಚಿ ನಡೆಸಿದ ಅವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದಾರೆ.
ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ರಾಜ್ಯ ಸರ್ಕಾರ ಕ್ವಿಂಟಲ್ ಗೆ ಹೆಚ್ಚುವರಿ 450 ರೂ. ನೀಡಲು ಉದ್ದೇಶಿಸಿದ್ದು, ಒಟ್ಟು 8 ಸಾವಿರ ರೂ. ಬೆಂಬಲ ಬೆಲೆ ನೀಡಲಾಗುವುದು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ನಾಫೆಡ್ ಖರೀದಿ ಏಜೆನ್ಸಿಯಾಗಿದೆ. ದಾಖಲೆ ನೀಡಿದ ಕಾರಣ ಖರೀದಿ ಪ್ರಕ್ರಿಯೆ ವಿಳಂಬವಾಗಿದೆ. ರಾಜ್ಯಾದ್ಯಂತ 400ಕ್ಕೂ ಹೆಚ್ಚು ಖರೀದಿ ಕೇಂದ್ರ ಆರಂಭಿಸಲಾಗಿದ್ದು, ತೊಗರಿ ಬೆಳೆಗಾರರಿಗೆ ಯಾವುದೇ ಆತಂಕ ಬೇಡ ಎಂದು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಕ್ವಿಂಟಲ್ ಗೆ 8000 ರೂ ದರದಲ್ಲಿ ತೊಗರಿ ಖರೀದಿಸುತ್ತಿದ್ದು, ರೈತರ ಬೇಡಿಕೆಯಂತೆ ಸ್ಪಂದಿಸಿ ಕ್ವಿಂಟಲ್ ಗೆ 450 ರೂಪಾಯಿ ಹೆಚ್ಚುವರಿ ದರ ನೀಡಲಾಗುವುದು ಎಂದು ಹೇಳಿದ್ದಾರೆ.