ಸಾಗರ್ (ಮಧ್ಯಪ್ರದೇಶ ): ಮದುವೆ ಮನೆಯಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದು ವರ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಸಾಗರ್ ನಲ್ಲಿ ಕಳೆದ ಶನಿವಾರ ಬೆಳಗ್ಗೆ ನಡೆದಿದೆ.
ವಧು ಮತ್ತು ವರ ತಮ್ಮ ಕುಟುಂಬ ಮತ್ತು ಸ್ನೇಹಿತರ ಮುಂದೆ ಹಾರ ಬದಲಾಯಿಸಿಕೊಂಡು ಸಂತೋಷದಲ್ಲಿದ್ದರು. ಆದರೆ ಇದ್ದಕ್ಕಿದ್ದಂತೆ ವರ ಹೃದಯಾಘಾತದಿಂದ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವಾಗ ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಹರ್ಷಿತ್ ಹಲವಾರು ವರ್ಷಗಳಿಂದ ಸಾಗರ್ನಲ್ಲಿ ವಾಸಿಸುತ್ತಿದ್ದರು ಮತ್ತು ಗೋಪಾಲ್ಗಂಜ್ನಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು. ಅವರು ಅವರ ನಾಲ್ಕು ಸಹೋದರಿಯರಲ್ಲಿ ಕಿರಿಯರಾಗಿದ್ದರು, ಮತ್ತು ಅವರ ಹಠಾತ್ ಸಾವು ಅವರ ಕುಟುಂಬವನ್ನು ದುಃಖದಲ್ಲಿ ಮುಳುಗಿಸಿದೆ.ಮದುವೆಯಲ್ಲಿ ಹರ್ಷಿತ್ ಸಂತೋಷದಿಂದ ನಗುತ್ತಿದ್ದರು ಮತ್ತು ಇಂತಹ ದುರಂತ ತಿರುವನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಸ್ನೇಹಿತರು ಕಂಬನಿ ಮಿಡಿದಿದ್ದಾರೆ.