ಕಳೆದ ವರ್ಷ ಕೋಲ್ಕತಾದ ಆರ್ ಜಿ ಕಾರ್ ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿಅಪರಾಧಿ ಸಂಜೋಯ್ ರಾಯ್ ದೋಷಿ ಎಂದು ಸಾಬೀತಾಗಿದ್ದು, ಇಂದು ಕೋರ್ಟ್ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ .ಹೌದು, ಅಪರಾಧಿ ‘ಸಂಜಯ್ ರಾಯ್’ ಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.ಹಾಗೂ ಮೃತಪಟ್ಟ ಸಂತ್ರಸ್ತೆ ಕುಟುಂಬಕ್ಕೆ 17 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶ ಹೊರಡಿಸಿದೆ.
ಆದರೆ, ಆದೇಶದ ಸಮಯದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದ ತರಬೇತಿ ವೈದ್ಯರ ತಂದೆ, ಆರೋಪಿಯಿಂದ 10 ಲಕ್ಷ ರೂ.ಗಳನ್ನು ಸ್ವೀಕರಿಸಲು ನಿರಾಕರಿಸಿದರು ಮತ್ತು ತನಗೆ ನ್ಯಾಯ ಮಾತ್ರ ಬೇಕು ಎಂದು ಹೇಳಿದರು.
ವೈದ್ಯರ ತಂದೆಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಇದು ಶಾಸನಬದ್ಧವಾಗಿದೆ, ಅದಕ್ಕಾಗಿಯೇ ನಾನು ಆರೋಪಿಗೆ ಮೊತ್ತವನ್ನು ನಿಮಗೆ ಪಾವತಿಸಲು ಆದೇಶಿಸಿದ್ದೇನೆ” ಎಂದು ಹೇಳಿದರು.ಜನವರಿ 18 ರಂದು ರಾಯ್ ಅವರನ್ನು ಕನಿಷ್ಠ ಜೀವಾವಧಿ ಶಿಕ್ಷೆ ಮತ್ತು ಗರಿಷ್ಠ ಮರಣದಂಡನೆ ವಿಧಿಸಬಹುದಾದ ಆರೋಪಗಳ ಅಡಿಯಲ್ಲಿ ದೋಷಿ ಎಂದು ಘೋಷಿಸಲಾಯಿತು.
ಆರ್ ಜಿ ಕಾರ್ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸಂಜೋಯ್ ರಾಯ್ ತಪ್ಪಿತಸ್ಥ ಎಂದು ಕೋಲ್ಕತ್ತಾದ ಸೆಷನ್ಸ್ ನ್ಯಾಯಾಲಯ ನಿನ್ನೆ ತೀರ್ಪು ನೀಡಿತ್ತು, ಸಿಯಾಲ್ಡಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಅನಿರ್ಬನ್ ದಾಸ್ ಅವರು ನಿನ್ನೆ ತೀರ್ಪು ನೀಡಿದ್ದರು.ಇಂದು ಕೋರ್ಟ್ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಸಂಜಯ್ ಎಸಗಿರುವ ಕೃತ್ಯ ಸಮಾಜದಲ್ಲಿ ಆತಂಕಕಾರಿಯಾಗಿದೆ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಸಿಬಿಐ ಪರ ವಕೀಲರು ಕೋಲ್ಕತ್ತಾ ಸೆಷನ್ಸ್ ಕೋರ್ಟ್ ಗೆ ಮನವಿ ಮಾಡಿದ್ದರು. ಕೋಲ್ಕತಾದ ಆರ್ಜಿ ಕಾರ್ ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಸಂಜೋಯ್ ರಾಯ್ ಅವರನ್ನು ಬಂಧಿಸಲಾಗಿತ್ತು.
ಕೋಲ್ಕತ್ತಾ ನಗರದ ಸರ್ಕಾರಿ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಕರ್ತವ್ಯ ನಿರತ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಸಂಜಯ್ ರಾಯ್ಗೆ ಪಶ್ಚಿಮ ಬಂಗಾಳದ ಕೋಲ್ಕತಾದ ಸಿಬಿಐ ನ್ಯಾಯಾಲಯ ಸೋಮವಾರ ಮಧ್ಯಾಹ್ನ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಸಿಬಿಐ ಮತ್ತು ಸಂತ್ರಸ್ತೆಯ ಕುಟುಂಬವು ರಾಯ್ ಅವರಿಗೆ ಗರಿಷ್ಠ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿತು.
ನಾನು ನಿರಪರಾಧಿ : ನನ್ನ ಮೇಲೆ ಸುಳ್ಳು ಆರೋಪ
“ನಿಮ್ಮ ವಿರುದ್ಧ ಸಾಬೀತಾಗಿರುವ ಆರೋಪಗಳನ್ನು ಹಿಂದಿನ ದಿನ ನಾನು ನಿಮಗೆ ಹೇಳಿದ್ದೆ” ಎಂದು ನ್ಯಾಯಾಧೀಶರು ಸಂಜಯ್ ರಾಯ್ ಅವರಿಗೆ ಹೇಳಿದರು.ಆರೋಪಿ ಸಂಜಯ್, “ನಾನು ಏನನ್ನೂ ಮಾಡಿಲ್ಲ, ಅತ್ಯಾಚಾರ ಅಥವಾ ಕೊಲೆ ಮಾಡಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ. ನೀವು ಎಲ್ಲವನ್ನೂ ನೋಡಿದ್ದೀರಿ. ನಾನು ನಿರಪರಾಧಿ. ನನಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ನಾನು ಈಗಾಗಲೇ ನಿಮಗೆ ಹೇಳಿದ್ದೇನೆ ಎಂದಿದ್ದಾನೆ.