ಬೆಂಗಳೂರು : ಬಿಗ್ ಬಾಸ್-11 ಫೈನಲ್ ಹಂತಕ್ಕೆ ತಲುಪಿದ್ದು, ಇತ್ತೀಚೆಗೆ ಗೌತಮಿ ಜಾಧವ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ ಧನರಾಜ್ ಆಚಾರ್ ಔಟ್ ಆಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಾಸ್ಯಭರಿತ ರೀಲ್ಸ್ ಮಾಡುವ ನೆಟ್ಟಿಗರ ಗಮನ ಸೆಳೆದಿದ್ದ ಧನರಾಜ್ ಆಚಾರ್ಯ ಬಳಿಕ ಗಿಚ್ಚಿಗಿಲಿಗಿಲಿ ಶೋದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು.
16 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ರಂಜಿಸಿದ್ದ ಧನರಾಜ್ ಆಚಾರ್ ಔಟ್ ಆಗಿದ್ದು, ಗೆಳೆಯ ಹನುಮಂತ ಕಣ್ಣೀರಿಟ್ಟಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ, ಮೋಕ್ಷಿತಾ, ಭವ್ಯಗೌಡ, ರಜತ್ ಉಳಿದಿದ್ದಾರೆ. ಬಿಗ್ ಬಾಸ್ 11 ವಿನ್ನರ್ ಯಾರು ಎಂಬ ಕುತೂಹಲ ಎಲ್ಲರಲ್ಲಿದೆ.