ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳ್ಳತನ, ದರೋಡೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲಿಯೂ ಇದೀಗ ನಮ್ಮ ಮೆಟ್ರೋದಲ್ಲಿಯೂ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮೆಟ್ರೋ ರೈಲು ಹಳಿಗಳ ಕೆಳಭಾಗದ ವಿದ್ಯುತ್ ಲೈನ್ ಗಳನ್ನೇ ಕಟ್ ಮಾಡಿಕೊಂಡು ಹೋಗಿದ್ದಾರೆ.
ಉದ್ದದ ಪವರ್ ಕೇಬಲ್ ಗಳನ್ನೇ ಕಳ್ಳರು ತುಂಡು ತುಂಡುಗಳನ್ನಾಗಿ ಕಟ್ ಮಾಡಿದ್ದಾರೆ. ಮೆಟ್ರೋ ಪಿಲ್ಲರ್ 12, 13, 14ರ ಬಳಿ ಅಳವಡಿಸಲಾಗಿರುವ ಕಾಪರ್ ಪವರ್ ಕೇಬಲ್ ಗಳನ್ನು ತುಂಡರಿಸಲಾಗಿದೆ.
ಪೀಣ್ಯ, ರಾಜಾಜಿನಗರ, ಬಸವನಗುಡಿ ಸೇರಿದಂತೆ ಮೂರು ಪ್ರಮುಖ ರೈಲು ಮಾರ್ಗಗಳಲ್ಲಿ ವಿದ್ಯುತ್ ಕೇಬಲ್ ಕಳುವು ಮಾಡಲಾಗಿದೆ. ಈ ಬಗ್ಗೆ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.