ಕಾರವಾರ: ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ದೇಹವನ್ನು ದುರುಳರು ಕೊಂಡೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ಘಟನೆ ನಡೆದಿದೆ.
ಸಾಲ್ಕೋಡು ಗ್ರಾಮದ ಕೃಷ್ಣ ಆಚಾರಿ ಎಂಬುವರಿಗೆ ಸೇರಿದ ಗರ್ಭ ಧರಿಸಿದ್ದ ಹಸುವನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ನಿನ್ನೆ ಮೇವು ತಿನ್ನಲು ಹೋಗಿದ್ದ ಹಸು ವಾಪಸ್ ಬಂದಿರಲಿಲ್ಲ. ಇಂದು ಬೆಳಗ್ಗೆ ಹಸುವಿಗಾಗಿ ಮಾಲೀಕ ಕೃಷ್ಣ ಆಚಾರಿ ಹುಡುಕಾಟ ನಡೆಸಿದ್ದಾಗ ಹಸುವಿನ ರುಂಡವನ್ನು ಬೇರ್ಪಡಿಸಿ ಕಾಲು ಕತ್ತರಿಸಿ ಹಾಕಿರುವುದು ಕಂಡು ಬಂದಿದೆ.
ಭಕ್ಷಣೆಗಾಗಿ ಹಸುವಿನ ಮಾಂಸವನ್ನು ಕೊಂಡೊಯ್ದಿರುವ ಸಾಧ್ಯತೆ ಇದೆ. ಕಾಡು ಪ್ರಾಣಿ ದಾಳಿ ಮಾಡಿದ್ದರೆ ದೇಹದ ಭಾಗ ಪ್ರತ್ಯೇಕವಾಗಿ ಬೀಳುವುದಿಲ್ಲ. ಮಾಂಸ ಭಕ್ಷಣೆಗೆ ಮಾಡಿರುವ ಕೃತ್ಯ ಇದಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಗರ್ಭ ಧರಿಸಿದ್ದ ಹಸುವನ್ನು ಹತ್ಯೆ ಮಾಡಿದ ಪಾಪಿಗಳು ಕರುವನ್ನು ಬಿಸಾಡಿ ಹೋಗಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.