ಪ್ರಯಾಗರಾಜ್: ಮಹಾಕುಂಭ ಮೇಳದಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಭಾರತದ ಮೊನಾಲಿಸಾ ಎಂದು ಗುರುತಿಸಲಾಗುತ್ತಿದ್ದ ಯುವತಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದರು. ತಮ್ಮ ಸೌಂದರ್ಯದಿಂದ ಎಲ್ಲರ ಗಮನ ಸೆಳೆದಿದ್ದ ಅವರು ಇದೀಗ ತಮ್ಮ ಮನೆಗೆ ವಾಪಸ್ಸಾಗಿದ್ದಾರೆ.
ಮಧ್ಯಪ್ರದೇಶದ ಮಹೇಶ್ವರ್ನಿಂದ ಮಹಾಕುಂಭಕ್ಕೆ ಬಂದಿದ್ದ ಮೊನಾಲಿಸಾ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಅವರ ಸೌಂದರ್ಯವನ್ನು ನೋಡಲು ಜನರು ಸಾಲುಗಟ್ಟಿ ನಿಂತಿದ್ದರು. ಇದರಿಂದಾಗಿ ಅವರು ತಮ್ಮ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಹೆಚ್ಚುತ್ತಿರುವ ಜನಸಂದಣಿ ಮತ್ತು ಗಮನದಿಂದಾಗಿ ಮೋನಾಲಿಸಾ ಅವರು ತುಂಬಾ ತೊಂದರೆಗೊಂಡಿದ್ದರು. ಆದ್ದರಿಂದ ಅವರ ಕುಟುಂಬಸ್ಥರು ಅವರನ್ನು ಮನೆಗೆ ಕರೆದೊಯ್ದಿದ್ದಾರೆ. ಮೋನಾಲಿಸಾ ಅವರ ಸಹೋದರಿ ವಿಧ್ಯಾ ಮಾತನಾಡಿ, ಜನರು ಅವರನ್ನು ನೋಡಲು ಅವರ ಹಿಂದೆ ಹಿಂದೆ ಬರುತ್ತಿದ್ದರು. ಇದರಿಂದ ವಸ್ತುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ” ಎಂದು ಹೇಳಿದರು.
ಈ ಘಟನೆ ಸಾಮಾಜಿಕ ಮಾಧ್ಯಮದ ಶಕ್ತಿಯನ್ನು ತೋರಿಸಿಕೊಟ್ಟಿದೆ. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಕೆಲವೇ ಗಂಟೆಗಳಲ್ಲಿ ಸೆಲೆಬ್ರಿಟಿಯನ್ನಾಗಿ ಮಾಡುವ ಶಕ್ತಿ ಸಾಮಾಜಿಕ ಮಾಧ್ಯಮಕ್ಕಿದೆ. ಆದರೆ ಇದು ಅನೇಕ ಸಮಸ್ಯೆಗಳನ್ನು ಸಹ ಸೃಷ್ಟಿಸುತ್ತದೆ.