ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಮೈ ಕೊರೆವ ಚಳಿ, ಮತ್ತೊಂದೆಡೆ ಮಳೆ ರಾಯನ ಅಬ್ಬರ ಜೋರಾಗಿದೆ.
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಹಲವೆಡೆ ರಸ್ತೆಗಳಲ್ಲಿ, ತಗ್ಗು ಪ್ರದೇಶಗಾಳಲ್ಲಿ ನೀರು ನಿಂತು ಅವಾಂತರಗಳು ಸೃಷ್ಟಿಯಾಗಿವೆ. ಮುಂಜಾನೆ ಐದು ಗಂಟೆಯಿಂದಲೇ ಆರಂಭವಾದ ತುಂತುರು ಮಳೆ ಬೆಳಗಾಗುತ್ತಿದ್ದಂತೆ ಜೋರಾಗಿ ಸುರಿಯಲಾರಂಭಿಸಿದೆ.
ಒಂದೆಡೆ ಶೀತಗಾಳಿ, ಮತ್ತೊಂದೆಡೆ ಮಳೆಯಿಂದಾಗಿ ವೀಕೆಂಡ್ ಖುಷಿಯನ್ನು ಹೊರಗಡೆ ಕಳಿಯಬೇಕೆಂದುಕೊಂಡವರಿಗೆ ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಣವಾಗಿದೆ. ಬೆಂಗಳೂರಿನ ಮೆಜೆಸ್ಟಿಕ್, ಟೌನ್ ಹಾಲ್, ಕಾರ್ಪೊರೇಷನ್, ರಿಚ್ ಮಂಡ್ ಸರ್ಕಲ್, ಶಾಂತಿನಗರ, ಲಾಲ್ ಬಾಬ್, ಹನುಮಂತನಗರ, ಕತ್ರಿಗುಪ್ಪೆ, ಚಾಮರಾಜಪೇಟೆ, ಗಿರಿನಗರ, ಶ್ರೀನಗರ, ಕೆ.ಆರ್ ಮಾರುಕಟ್ಟೆ, ಸ್ಯಾಟಲೈಟ್, ವಿಜಯನಗರ, ರಾಜಾಜಿನಗರ, ಆರ್.ರ್ ನಗರ, ಮೈಸೂರು ರೋಡ್ ಸೇರಿದಂತೆ ಹಲವೆಡೆ ಮಳೆಸುರಿಯುತ್ತಿದ್ದು, ಜನರ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾಗಿದೆ.
ಬೆಂಗಳೂರಿನಲ್ಲಿ ಇಂದು ಮಾತ್ರವಲ್ಲ ನಾಳೆಯೂ ನಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.