ಮಂಗಳೂರು: ಮಂಗಳೂರಿನ ಉಳ್ಳಾಲ ಬಳಿಕ ಕೋಟೆಕರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ, ಚಿನ್ನಾಭರಣಗಳನ್ನು ಲೂಟಿ ಮಾಡಿಕೊಂಡು ಕಾರಿನಲ್ಲಿ ಎಸ್ಕೇಪ್ ಆಗಿರುವ ಐದುಜನ ದರೋಡೆಕೋರರ ಗ್ಯಾಂಗ್ ಕೇರಳಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಮಾಸ್ಕ್ ಧರಿಸಿದ ವ್ಯಕ್ತಿಯೋರ್ವ ಕಪ್ಪು ಕಾರಿನಲ್ಲಿ ಮಂಗಳೂರಿನ ತಲಪಾಡಿ ಟೋಲ್ ಗೇಟ್ ಮೂಲಕ ಪರಾರಿಯಾಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಚಾಲಕನ ಸೀಟ್ ನಲ್ಲಿ ಓರ್ವ ಮಾತ್ರ ಇದ್ದು, ಆತ ಮಾಸ್ಕ್ ಹಾಕಿಕೊಂಡಿದ್ದ. ಕೋಟೆಕಾರು ಬ್ಯಾಂಕ್ ದರೋಡೇ ಬಳಿಕ ಇದೇ ಕಾರಿನಲ್ಲಿ ಹಣ, ಚಿನ್ನಾಭರಣ ತುಂಬಿಕೊಂಡು ಐದು ಜನ ಕಲ್ಳರು ಪರಾರಿಯಾಗಿದ್ದರು.
ದರೋಡೆಕೋರರು ಬ್ಯಾಂಕ್ ಲೂಟಿ ಬಳಿಕ ಬೇರೆ ಬೇರೆ ವಾಹನಗಳಲ್ಲಿ ತೆರಳಿರುವ ಸಾಧ್ಯತೆ ಇದೆ. ಅಲ್ಲದೇ ಕೇರಳ ರಾಜ್ಯಕ್ಕೆ ಎಸ್ಕೇಪ್ ಆಗಿರುವ ಶಂಕೆ ಇದೆ ಎನ್ನಲಾಗಿದೆ.