ಹಾಸನ : ರಾಜ್ಯದಲ್ಲಿ ಪಾಪಿಗಳು ಮತ್ತೊಂದು ಕ್ರೌರ್ಯ ಮೆರೆದಿರುವ ಭಯಾನಕ ಘಟನೆ ವರದಿಯಾಗಿದೆ.
ಹಾಸನದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರು ಕದ್ದೊಯ್ದು ದುಷ್ಕರ್ಮಿಗಳು ಬಾಡೂಟ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.
ಆಲೂರು ತಾಲೂಕಿನ ಹೆದ್ದುರ್ಗೆ ಗ್ರಾಮದ ಹೂವಣ್ಣ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ. ನಂತರ ಮಾಲೀಕರು ಕರುವನ್ನು ಹುಡುಕಿದಾಗ ಕರುವಿನ ರುಂಡ ,ದೇಹದ ಅವಶೇಷಗಳು ರೈಲ್ವೇ ಗೇಟ್ ಸಮೀಪ ಪತ್ತೆಯಾಗಿದೆ.
ಕರು ಕದ್ದೊಯ್ದು ಕಡಿದು ಮಾಂಸದೂಟ ಮಾಡಿರುವ ಆರೋಪ ಕೇಳಿಬಂದಿದೆ.ಘಟನೆ ಸಂಬಂಧ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಮೋಹನ್, ಅಜಿತ್, ಅಜ್ಗರ್, ಕೌಶಿಕ್, ಸೇರಿ 7 ಮಂದಿಯನ್ನು ಬಂಧಿಸಲಾಗಿದೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿಗಳು ಕರುವಿನ ದೇಹದ ಭಾಗವನ್ನು ನದಿಗೆ ಎಸೆಯುತ್ತಿರುವುದನ್ನು ಸ್ಥಳೀಯರು ನೋಡಿದ್ದರು ಎನ್ನಲಾಗಿದೆ .