ನವದೆಹಲಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ದಾಳಿ ನಡೆಸಿದ ಮತ್ತೋರ್ವ ದಾಳಿಕೋರನ ಫೋಟೋ ರಿವೀಲ್ ಆಗಿದೆ.
ಶಂಕಿತ ದಾಳಿಕೋರ ಬಾಂದ್ರಾದಲ್ಲಿ ನಡೆದ ಘಟನೆಯ ಒಂದು ದಿನದ ನಂತರ ಹೊಸ ಫೋಟೋದಲ್ಲಿ ಕಾಣಿಸಿಕೊಂಡಿದ್ದಾನೆ. ಆರೋಪಿ ನೀಲಿ ಶರ್ಟ್ ಧರಿಸಿದ್ದರು. ನಟನ ಮನೆಯಿಂದ ಹೆಚ್ಚು ದೂರವಿಲ್ಲದ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಆತ ಕಾಣಿಸಿಕೊಂಡಿದ್ದಾನೆ.
ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ದಾಳಿಯ ನಂತರ ಆತ ಕೈಕಟ್ಟಿಕೊಂಡು ಹೋಗುವುದನ್ನು ತೋರಿಸುತ್ತದೆ. ದಾಳಿಯ ನಂತರ ಮರುದಿನ ಬೆಳಿಗ್ಗೆ 8 ಗಂಟೆಯವರೆಗೆ ಶಂಕಿತ ಬಾಂದ್ರಾದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿದು ಗಾಯಗೊಳಿಸಿದ ಶಂಕಿತನ ಫೋಟೋವನ್ನು ನಿನ್ನೆ ಬಿಡುಗಡೆ ಮಾಡಲಾಗಿತ್ತು, ಇಂದು ಮತ್ತೋರ್ವನ ಫೋಟೋ ರಿವೀಲ್ ಮಾಡಲಾಗಿದೆ.ಪ್ರಕರಣದ ಬಗ್ಗೆ ತನಿಖೆ ಚುರುಕಾಗಿದ್ದು, ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ದಾಳಿ ನಡೆಸಿದ್ದ ಓರ್ವನನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ .ಸೈಫ್ ಅಲಿ ಖಾನ್ ಅವರ ನಿವಾಸದಲ್ಲೇ ಗುರುವಾರ ರಾತ್ರಿ ಹಲ್ಲೆ ನಡೆಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸೈಫ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಚಾಕುವಿನಿಂದ 6 ಬಾರಿ ಇರಿದಿದ್ದು, ಅದರಲ್ಲಿ ಎರಡು ಕಡೆ ಗಂಭೀರ ಗಾಯಗಳಾಗಿವೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.