ಚೀನಾಗೆ ಮತ್ತೊಂದು ಶಾಕ್ ಎದುರಾಗಿದ್ದು, ನಾಳೆಯಿಂದ ಅಮೆರಿಕದಲ್ಲಿ ಟಿಕ್ ಟಾಕ್ ನಿಷೇಧವಾಗಲಿದೆ. ನಾಳೆಯಿಂದ ಅಮೆರಿಕದಲ್ಲಿ ಟಿಕ್ ಟಾಕ್ ನಿಷೇಧವಾಗಲಿದ್ದು, ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.ಹೌದು, ನಿಷೇಧ ಕ್ರಮವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದ್ದು, ನಾಳೆಯಿಂದ ಟಿಕ್ ಟಾಕ್ ಬ್ಯಾನ್ ಆಗಲಿದೆ.
ರಾಷ್ಟ್ರದ ಭದ್ರತೆ ದೃಷ್ಟಿಯಿಂದ ಚೀನಾ ಮೂಲದ ಟಿಕ್ ಟಾಕ್ ಬ್ಯಾನ್ ಮಾಡಿ ಆದೇಶ ಹೊರಡಿಸಲಾಗಿದೆ.
ಭಾರತದಲ್ಲಿ ಕೂಡ ಚೀನಾ ಮೂಲದ ಟಿಕ್ ಟಾಕ್ ಆಪ್ ಅನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು.
ಲಡಾಖ್ ಗಡಿಯಲ್ಲಿ ಚೀನಾ ಯೋಧರಿಂದ ಸಂಘರ್ಷ ಉಂಟಾದ ನಂತರದಲ್ಲಿ ಚೀನಾಗೆ ಸರಿಯಾಗೇ ಬಿಸಿ ಮುಟ್ಟಿಸಲು ಮುಂದಾಗಿದ್ದ ಕೇಂದ್ರ ಸರ್ಕಾರ ಟಿಕ್ ಟಾಕ್ ಸೇರಿದಂತೆ 59 ಚೀನಾ ಅಪ್ ಗಳನ್ನು ಬ್ಯಾನ್ ಮಾಡಿತ್ತು.