ಮೈಸೂರು : ರಾಜ್ಯದಲ್ಲಿ ಮತ್ತೊಂದು ವಂಚನೆ ಪ್ರಕರಣ ಬಯಲಿಗೆ ಬಂದಿದ್ದು, ಎಟಿಎಂ ಮೆಷಿನ್ ಗೆ ಹಣ ತುಂಬಿಸದೇ ವಂಚನೆ ಎಸಗಿದ ಘಟನೆ ಮೈಸೂರಿನಲ್ಲಿ ಬಯಲಿಗೆ ಬಂದಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಗೆರೆಯಲ್ಲಿ ಘಟನೆ ನಡೆದಿದೆ. ಘಟನೆ ಸಂಬಂಧಿ ಸಿಬ್ಬಂದಿ ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಎಟಿಎಂ ಮೆಷಿನ್ ಗೆ ಹಣ ತುಂಬಿಸದೇ ಲಕ್ಷ ಲಕ್ಷ ಹಣ ಲೂಟಿ ಮಾಡಿದ್ದಾರೆ.
ಎಟಿಎಂ ಗಳಿಗೆ ಹಣ ತುಂಬಿಸುವ ಏಜೆನ್ಸಿ ಪಡೆದಿದ್ದ ಟಿಎಲ್ ಎಂಟರ್ ಪ್ರೈಸಸ್ ಕಂಪನಿಯಲ್ಲಿ ಸಿಬ್ಬಂದಿ ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ಕೆಲಸ ಮಾಡುತ್ತಿದ್ದರು. ಎಟಿಎಂಗಳಿಗೆ ಹಣ ಹಾಕುವ ಕೆಲಸ ಮಾಡುತ್ತಿದ್ದ ಅಕ್ಷಯ್ ಕುಮಾರ್ ಎಟಿಎಂ ಗಳಿಗೆ ಹಣ ಹಾಕದೇ ಬ್ಯಾಗ್ ನಲ್ಲಿ ಮನೆಗೆ ಕೊಂಡೊಯ್ಯುತ್ತಿದ್ದನು, ಅಲ್ಲದೇ ಈ ಹಣದಿಂದ ಚಿನ್ನಾಭರಣ ಖರೀದಿ ಮಾಡುತ್ತಿದ್ದನು.
ಆಡಿಟ್ ನಡೆಸಿದಾಗ ಇಬ್ಬರ ವಂಚನೆ ಬಯಲಾಗಿದ್ದು, ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಅಲ್ಲದೇ ಬ್ಯಾಗ್ ನಲ್ಲಿ ಹಣ ಕೊಂಡೊಯ್ಯುತ್ತಿದ್ದ ಹಾಗೂ ಚಿನ್ನ ಖರೀದಿಸುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.