2015ರಲ್ಲಿ ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ತನ್ನ ಪತ್ನಿಯನ್ನು ಕೊಂದ ಆರೋಪದ ಮೇಲೆ ಭಾರತದ ಗುಜರಾತ್‌ನ ಭದ್ರೇಶ್ ಕುಮಾರ್ ಚೇತನ್‌ಭಾಯ್ ಪಟೇಲ್ ನನ್ನು ಎಫ್‌ಬಿಐ ಹುಡುಕುತ್ತಿದೆ.
ಎಫ್‌ಬಿಐ ಪ್ರಕಾರ, ಭದ್ರೇಶ್ ಪಟೇಲ್ ತನ್ನ ಪತ್ನಿ ಪಲಕ್ ಅವರನ್ನು ಒಂದು ಡೊನಟ್ ಅಂಗಡಿಯಲ್ಲಿ ಕೊಲೆ ಮಾಡಿದ್ದಾನೆ. ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಭದ್ರೇಶ್ ಪಟೇಲ್ ತನ್ನ ಪತ್ನಿಯನ್ನು ಹಲವಾರು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಭದ್ರೇಶ್ ಪಟೇಲ್ ನನ್ನು ಶಸ್ತ್ರಸಜ್ಜಿತ ಮತ್ತು ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಎಫ್‌ಬಿಐ ತನ್ನ ಹತ್ತು ʼಮೋಸ್ಟ್ ವಾಂಟೆಡ್ʼ ಪರಾರಿಯಾದವರ ಪಟ್ಟಿಯಲ್ಲಿ ಅವನನ್ನು ಸೇರಿಸಿದೆ. ಪಟೇಲ್‌ನ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಎಫ್‌ಬಿಐಗೆ ತಿಳಿಸುವಂತೆ ಮನವಿ ಮಾಡಿದೆ.
WANTED—considered armed and extremely dangerous! Help the #FBI find one of our Ten Most Wanted Fugitives, Bhadreshkumar Chetanbhai Patel.
If you have any information on Patel, a 34-year-old wanted for the violent murder of his wife, contact the FBI. https://t.co/f4NEKw2Rvi pic.twitter.com/9TvpMPlIEp
— FBI (@FBI) January 15, 2025