ದಪ್ಪಗಿರುವುದಕ್ಕೆ ಯುವತಿಯರು ಮದುವೆಗೆ ನಿರಾಕರಿಸಿದ್ದಾರೆ ಎಂದು ಆರೋಪಿಸಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ನಾರಾಯಣಪ್ಪನಪಾಳ್ಯದಲ್ಲಿ ನಡೆದಿದೆ.
ಆಟೋ ಚಾಲಕ ವೆಂಕಟೇಶ್ ಎಂಬುವವರು (29) ಆತ್ಮಹತ್ಯೆ ಮಾಡಿಕೊಂಡಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸುಮಾರು 15 ಕಡೆ ವೆಂಕಟೇಶ್ ಹುಡುಗಿ ನೋಡಿದ್ದರು. ಆದರೆ ಹೋದಲೆಲ್ಲಾ ಹುಡುಗ ದಪ್ಪ ಎಂದು ಹುಡುಗಿ ಮನೆಯವರು ಮದುವೆಗೆ ನಿರಾಕರಿಸಿದ್ದರು ಎನ್ನಲಾಗಿದೆ.
ಹುಡುಗ ದಪ್ಪಗಿದ್ದಾನೆ ಎಂದು ಹುಡುಗಿ/ ಮನೆಯವರು ಮದುವೆ ನಿರಾಕರಿಸಿದ್ದರು. ಈ ಹಿನ್ನೆಲೆ ಮನನೊಂದ ವೆಂಕಟೇಶ್ ನೇಣಿಗೆ ಶರಣಾಗಿದ್ದಾರೆ. ನಾನು ದಪ್ಪಗಿದ್ದೇನೆ ಎಂದು ಕೊರಗುತ್ತಿದ್ದ ವೆಂಕಟೇಶ್ ಹುಡುಗಿ ಸಿಗದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.