ದಕ್ಷಿಣ ಕೊರಿಯಾದ ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದ್ದ ವಿಮಾನದ ಎಂಜಿನ್ ನಲ್ಲಿ ಹಕ್ಕಿಯ ಗರಿಗಳು ಹಾಗೂ ರಕ್ತ ಪತ್ತೆಯಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೆಜು ಏರ್ ಸಂಸ್ಥೆಗೆ ಸೇರಿದ ವಿಮಾನವೊಂದು ಡಿ.29ರಂದು ಲ್ಯಾಂಡ್ ಆಗುವ ವೇಳೆ ಪತನಗೊಂಡಿತ್ತು. 6 ಜನ ಸಿಬ್ಬಂದಿ ಸೇರಿದಂತೆ 179 ಜನ ಸಾವನ್ನಪ್ಪಿದ್ದರು. ಇಬ್ಬರು ಮಾತ್ರ ಬದುಕುಳಿದಿದ್ದರು. ವಿಮಾನ ಬ್ಯಾಂಕಾಕ್ ನಿಂದ ಮುವಾನ್ ಗೆ ಬಂದಿತ್ತು. ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿ ಪತನಗೊಂಡಿತ್ತು.
ಅಪಘಾತದ ಸ್ಥಳದಿಂದ ವಶಕ್ಕೆ ಪಡೆದಿದ್ದ ವಿಮಾನದ ಎಂಜಿನ್ ಗಳಲ್ಲಿ ಹಕ್ಕಿಯ ಗರಿಗಳು, ರಕ್ತ ಪತ್ತೆಯಾಗಿದೆ. ಆದರೆ ಈ ಬಗ್ಗೆ ದಕ್ಷಿಣ ಕೊರಿಯಾ ಸಾರಿಗೆ ಇಲಾಖೆ ಪ್ರತಿಕ್ರಿಯಿಸಲು ನಿರಾಕರಿಸಿದೆ ಎನ್ನಲಾಗಿದೆ.