ವಿಜಯಪುರ : ವಿಜಯಪುರದಲ್ಲಿ ದಂಪತಿ ಹತ್ಯೆಗೆ ಯತ್ನಿಸಿ ದರೋಡೆ ಮಾಡಿದ್ದ ಮುಸುಕುಧಾರಿಗಳ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ವಿಜಯಪುರ ನಗರದ ಹೊರವಲಯದ ಟೋಲ್ ಪ್ಲಾಜಾದಲ್ಲಿ ಫೈರಿಂಗ್ ನಡೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ 50 ರಲ್ಲಿ ಮುಸುಕುಧಾರಿಗಳ ಮೇಲೆ ಪೊಲೀಸರು ಗುಂಡು ಹಾರಿಸಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಮಧ್ಯಪ್ರದೇಶ ಮೂಲದ ದರೋಡೆಕೋರ ಮಹೇಶ್ ಕಾಲಿಗೆ ಗುಂಡು ತಗುಲಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ . ಉಳಿದವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಏನಿದು ಘಟನೆ
ವಿಜಯಪುರದಲ್ಲಿ ದರೋಡೆ ಗ್ಯಾಂಗ್ ದುಷ್ಕ್ರತ್ಯ ನಡೆಸಿದ್ದು, ಚೈನಾಪುರ ಲೇಔಟ್ ನಲ್ಲಿ ದರೋಡೆಗೆ ಬಂದಿದ್ದ ಗ್ಯಾಂಗ್ ದಂಪತಿ ಹತ್ಯೆಗೆ ಯತ್ನಿಸಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ನಿನ್ನೆ ರಾತ್ರಿ ಮನೆಗೆ ನುಗ್ಗಿದ ಗ್ಯಾಂಗ್ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆಗೆ ಯತ್ನಿಸಿದೆ. ಮನೆ ಮಾಲೀಕ ಸಂತೋಷ್ ಗೆ ಚಾಕು ಇರಿದು ಹತ್ಯೆ ಯತ್ನಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಸಂತೋಷ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಸಂತೋಷ್ ಪತ್ನಿ ಭಾಗ್ಯಲಕ್ಷ್ಮಿ ಮೇಲೂ ಹಲ್ಲೆ ನಡೆಸಿದ ಗ್ಯಾಂಗ್ ಚಿನ್ನದ ಸರ ಕಿತ್ತು ಪರಾರಿಯಾಗಿದೆ. ಮುಸುಕುಧಾರಿ ಗ್ಯಾಂಗ್ ಈ ಕೃತ್ಯ ಎಸಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.