ಮುಂಬೈ : ಬಾಲಿವುಡ್ ನಟ ‘ಸೈಫ್ ಅಲಿ ಖಾನ್’ ಕೇಸ್ ಗೆ ಕನ್ನಡಿಗ ಎನ್’ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಎಂಟ್ರಿ ಕೊಟ್ಟಿದ್ದು, ಸೈಫ್ ನಿವಾಸದಲ್ಲಿ ತನಿಖೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಗುರುವಾರ ಸೈಫ್ ಅಲಿ ಖಾನ್ ಅವರ ಬಾಂದ್ರಾ ನಿವಾಸದಲ್ಲಿ ಕಾಣಿಸಿಕೊಂಡರು. ಮುಂಬೈ ಪೊಲೀಸರು ತಮ್ಮ ಪೊಲೀಸರ ತಂಡದೊಂದಿಗೆ ಸ್ಥಳದಲ್ಲಿ ಕಾಣಿಸಿಕೊಂಡರು. ನಟನ ನಿವಾಸಕ್ಕೆ ದಯಾ ನಾಯಕ್ ಖಡಕ್ ಎಂಟ್ರಿ ಕೊಟ್ಟ ವಿಡಿಯೋ ವೈರಲ್ ಆಗಿದೆ. ಜೇಬಿನಲ್ಲಿ ಪಿಸ್ತೂಲ್ ಇಟ್ಟುಕೊಂಡು ಮನೆಯ ಸುತ್ತಾಮುತ್ತಾ ಶೋಧ ನಡೆಸಿದ್ದಾರೆ.
ಖಾಕಿ ಸಮವಸ್ತ್ರದ ಬದಲು ಕಪ್ಪು ಟೀ ಶರ್ಟ್ ಮತ್ತು ಡೆನಿಮ್ ಪ್ಯಾಂಟ್ ಧರಿಸಿದ್ದರು. ಒಂದು ವೀಡಿಯೊದಲ್ಲಿ ಪೊಲೀಸ್ ಅಧಿಕಾರಿ ತನ್ನ ಒಂದು ಜೇಬಿನಲ್ಲಿ ಬಂದೂಕು ಹಿಡಿದು ನಡೆಯುತ್ತಿರುವುದನ್ನು ತೋರಿಸುತ್ತದೆ.
View this post on Instagram
View this post on Instagram