ಶಿವಮೊಗ್ಗ: ಸಾಗುವಾನಿ ಮರಗಳ ಅಕ್ರಮ ಕಡಿತಲೆ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಅರಣ್ಯ ಇಲಾಖೆಯ ಇಬ್ಬರು ನೌಕರರನ್ನು ಅಮಾನತು ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಉಳ್ಳೂರು ಉಪವಲಯ ಅರಣ್ಯ ಅಧಿಕಾರಿ ಸುಂದರಮೂರ್ತಿ ಮತ್ತು ಗಸ್ತು ಅರಣ್ಯಪಾಲಕ ಪ್ರವೀಣ್ ಕುಮಾರ್ ಅವರನ್ನು ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೇವೆಯಿಂದ ಅಮಾನತು ಮಾಡಿದ್ದಾರೆ.
ಕಾಸ್ಪಾಡಿ ಗ್ರಾಮದ ಸರ್ವೇ ನಂಬರ್ 4 ಮತ್ತು 21ರಲ್ಲಿ ಸಾಗುವಾನಿ ಮರಗಳ ಅಕ್ರಮ ಕಡಿತಲೆ ಮಾಡಿದ್ದ ನಾಟಾ ವಶಪಡಿಸಿಕೊಳ್ಳುವಲ್ಲಿ ಇವರಿಬ್ಬರು ನಿರ್ಲಕ್ಷ್ಯ ವಹಿಸಿದ್ದು, ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಇವರಿಬ್ಬರನ್ನು ಅಮಾನತು ಮಾಡಲಾಗಿದೆ.