ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಖಾತಾ ಮಾಡಿಸಲು ಹೊಸ ವೆಬ್ ಸೈಟ್ ಆರಂಭಿಸಲಾಗಿದ್ದು, ಖಾತೆ ಇಲ್ಲದವರೂ ಸಹ ಇ-ಖಾತಾ ಪಡೆಯಬಹುದಾಗಿದೆ. ಆನ್ ಲೈನ್ ಮೂಲಕ ಖಾತಾ ಪಡೆಯೋದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು ಎನ್ನುವ ವಿವರ ಇಲ್ಲಿದೆ.
ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದು, ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಖಾತಾ ಮಾಡಿಸಲು ಹೊಸ ವೆಬ್ ಸೈಟ್ ಆರಂಭಿಸಲಾಗಿದ್ದು, ಖಾತೆ ಇಲ್ಲದವರೂ ಸಹ ಇ-ಖಾತಾ ಪಡೆಯಬಹುದಾಗಿದೆ. ಆನ್ ಲೈನ್ ಮೂಲಕ ಖಾತಾ ಪಡೆಯೋದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು ಎನ್ನುವ ವಿವರ ಇಲ್ಲಿದೆ.
ಮಾಲೀಕರ ಆಧಾರ್ ಕಾರ್ಡ್, ಆಸ್ತಿ ತೆರಿಗೆ ಐಡಿ, ಮಾರಾಟ / ರಿಜಿಸ್ಟರ್ ಡೀಡ್ ಸಂಖ್ಯೆ, ಬೆಸ್ಕಾಂ ಖಾತೆಯ ಸಂಖ್ಯೆ (ಖಾಲಿ ನಿವೇಶನವಿದ್ದರೆ ಅಗತ್ಯವಿಲ್ಲ), ಆಸ್ತಿ ಫೋಟೋ ಈ ಎಲ್ಲಾ ದಾಖಲೆಗಳು ಬಿಬಿಎಂಪಿಯಲ್ಲಿರುವ ದಾಖಲೆಗಳೊಂದಿಗೆ ಹೊಂದಾಣಿಕೆಯಾದರೆ ಕೂಡಲೇ ಅಂತಿಮ ಇ – ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಕುರಿತಂತೆ ಸಂಶಯವಿದ್ದಲ್ಲಿ ಇ – ಖಾತಾ ಸಹಾಯವಾಣಿ 94806 83695 ಗೆ ಕರೆ ಮಾಡಿ ಸಲಹೆ ಪಡೆಯಬಹುದು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಖಾತಾ ಮಾಡಿಸಲು ಹೊಸ ವೆಬ್ ಸೈಟ್ ಆರಂಭಿಸಲಾಗಿದ್ದು, ಖಾತೆ ಇಲ್ಲದವರೂ ಸಹ ಇ-ಖಾತಾ ಪಡೆಯಬಹುದಾಗಿದೆ. ಆನ್ ಲೈನ್ ಮೂಲಕ ಖಾತಾ ಪಡೆಯೋದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು ಎನ್ನುವ ವಿವರ ಇಲ್ಲಿದೆ.
ಹೆಚ್ಚಿನ ಮಾಹಿತಿಗೆ https://t.co/gj2azoGjLY ವೆಬ್ ವಿಳಾಸಕ್ಕೆ ಭೇಟಿ ನೀಡಿ. pic.twitter.com/W74G4vKCJU
— DK Shivakumar (@DKShivakumar) January 16, 2025