ಬೆಂಗಳೂರು: ಕರ್ನಾಟಕದ ರಾಜ್ಯದ ಜನರನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್ ಜಿಲ್ಲಾಡಳಿತ ಭವನದಲ್ಲಿ ಹಾಡಹಗಲೇ ಶೂಟ್ ಔಟ್ ನಡೆದಿದೆ. ಭದ್ರತಾ ವೈಫಲ್ಯವನ್ನು ತೋರಿಸುತ್ತದೆ. ಸುರಕ್ಷಿತ ಪ್ರದೇಶಗಳಲ್ಲಿ ಒಂದಾದ ಜಿಲ್ಲಾ ಕೇಂದ್ರದ ಬಳಿ ಘಟನೆ ನಡೆದಿದೆ. ಕರ್ನಾಟಕ ರಾಜ್ಯದಲ್ಲಿ ದರೋಡೆಕೋರರಿಗೆ ಯಾವುದೇ ಭಯವಿಲ್ಲದಂತಾಗಿದೆ. ರಾಜ್ಯ ಸರ್ಕಾರ ಜನರ ಸುರಕ್ಷತೆ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದ್ದಾರೆ.
ದರೋಡೆಕೋರರಿಗೆ ಸರ್ಕಾರ ಮತ್ತು ಪೊಲೀಸರ ಬಗ್ಗೆ ಯಾವುದೇ ಭಯವಿಲ್ಲದೆ ಹೋದರೆ, ಇಂಥ ಘಟನೆಗಳು ರಾಜಾರೋಷವಾಗಿ ನಡೆಯುತ್ತವೆ. ಬೀದರ್ ಜಿಲ್ಲಾಡಳಿತ ಭವನದ ಬಳಿ ಹಾಡಹಗಲೇ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಗಾರ್ಡ್ ಗಳು ಸಾವನ್ನಪ್ಪಿದ್ದಾರೆ. ರಾಜ್ಯದ ಕಾಂಗ್ರೆಸ ಸರ್ಕಾರದ ಆಡಳಿತದಲ್ಲಿ ಹಾಡಹಗಲೇ ಇಂತಹ ದರೋಡೆಗಳು ನಡೆಯುತ್ತಿರುವದು ಸರ್ಕಾರದ ಆಡಳಿತದ ವೈಫಲ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ದರೋಡೆಕೋರರಿಗೆ ಸರ್ಕಾರ ಮತ್ತು ಪೊಲೀಸರ ಬಗ್ಗೆ ಯಾವುದೇ ಭಯವಿಲ್ಲದೆ ಹೋದರೆ, ಇಂಥ ಘಟನೆಗಳು ರಾಜಾರೋಷವಾಗಿ ನಡೆಯುತ್ತವೆ. ಬೀದರ್ ಜಿಲ್ಲಾಡಳಿತ ಭವನದ ಬಳಿ ಹಾಡಹಗಲೇ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಗಾರ್ಡ್ ಗಳು ಸಾವನ್ನಪ್ಪಿದ್ದಾರೆ. ರಾಜ್ಯದ ಕಾಂಗ್ರೆಸ ಸರ್ಕಾರದ ಆಡಳಿತದಲ್ಲಿ ಹಾಡು ಹಗಲೇ ಇಂತಹ ದರೋಡೆಗಳು ನಡೆಯುತ್ತಿರುವದು ಸರ್ಕಾರದ ಆಡಳಿತದ… pic.twitter.com/6ltIKuY35r
— Pralhad Joshi (@JoshiPralhad) January 16, 2025