ಶ್ರೀನಗರ: ಕೋವಿಡ್ ಮಹಾಮಾರಿ ಬಳಿಕ ಹೊಸ ಹೊಸ ವೈರಸ್ ಗಳು ಜನರನ್ನು ಕಡುತ್ತಿದ್ದು, ಇದೀಗ ವಿಚಿತ್ರ ಕಯಿಲೆಗೆ ಒಂದೇ ತಿಂಗಳಲ್ಲಿ 15 ಜನರು ಬಲಿಯಾಗಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ.
ಇದೀಗ 9 ವರ್ಷದ ಬಾಲಕಿ ಜಬಿನಾ ಈ ಕಾಯಿಲೆಯಿಂದ ಸಾವನ್ನಪ್ಪಿದ್ದು, ಕಳೆದ ಒಂದು ತಿಂಗಳಲ್ಲಿ ಹೀಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಜಮ್ಮುವಿನ ರಜೌರಿ ಜಿಲ್ಲೆಯಲ್ಲಿ ನಿಗೂಢ ಕಾಯಿಲೆಗೆ ಜನರು ಬಲಿಯಾಗುತ್ತಿದ್ದಾರೆ. ಇದೀಗ ಬಾಲಕಿ ಸಾವನ್ನಪ್ಪಿದ್ದು, ಕಳೆದ ನಾಲ್ಕು ದಿನಗಳ ಹಿಂದಷ್ಟೇ ಬಾಲಕಿಯ ಸಹೋದರ ಹಾಗೂ ಅಜ್ಜ ಕೂದ ಇದೇ ವಿಚಿತ್ರ ಕಾಯಿಲೆಯಿಂಸ ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿನ ಬಗ್ಗೆ ತನಿಖೆಗೆ ಸರ್ಕಾರ ಎಸ್ ಐಟಿ ರಚನೆ ಮಾಡಿದೆ. ಜಮ್ಮುಕಾಶ್ಮೀರ ಆರೋಗ್ಯ ಸಚಿವ ಸಕೀನಾ ಮಸೂದ್, ಬಾಧಲ್ ಗ್ರಾಮದಲ್ಲಿ 15 ಜನರು ಸಾವನ್ನಪ್ಪಲು ಯಾವುದೇ ನಿಗೂಢ ಕಾಯಿಲೆ ಕಾರಣವಲ್ಲ ಎಂದಿದ್ದಾರೆ. ಜಿಲ್ಲೆಯಲ್ಲಿ ಯವುದೇ ವೈರಸ್, ಸೋಂಕು, ರೋಗ ಕಂದುಬಂದಿಲ್ಲ. ಆದರೆ ಸಾವಿನ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ . ತನಿಖೆ ಬಳಿಕವೇ ಗೊತ್ತಾಗಲಿದೆ ಎಂದಿದ್ದಾರೆ.