ತುಮಕೂರು : ತೆಂಗಿನಕಾಯಿ ನೀರಿನ ಗುಂಡಿಗೆ ಬಿದ್ದು 2 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ತಿಪಟೂರಿನ ಮೀಸೆತಿಪ್ಪನಹಳ್ಳಿ ಗೇಟ್ ನಲ್ಲಿ ನಡೆದಿದೆ.
ಮೃತಪಟ್ಟ ಬಾಲಕಿಯನ್ನು ಹರೀಂದ್ರ ಕುಮಾರ್, ರೀನಾದೇವಿ ದಂಪತಿಯ ಪುತ್ರಿ ಕುಸುಮಾಕುಮಾರಿ (2 ) ಎಂದು ಗುರುತಿಸಲಾಗಿದೆ.ಬಿಹಾರ ಮೂಲದ ಹರೀಂದ್ರ ಕುಮಾರ್, ರೀನಾದೇವಿ ದಂಪತಿಗಳು ತಿಪಟೂರಿನ ತೆಂಗಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಆಟವಾಡುತ್ತಿದ್ದ ಮಗು ಗುಂಡಿಗೆ ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ. ಘಟನೆ ಸಂಬಂಧ ಹೊನ್ನವಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.