alex Certify BIG NEWS : ಪೋಷಕರೇ ಗಮನಿಸಿ : ರಾಜ್ಯದ ವಸತಿ ಶಾಲೆಗಳಲ್ಲಿ 6 ನೇ ತರಗತಿ ಪ್ರವೇಶಾತಿ ಪ್ರಕ್ರಿಯೆ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಪೋಷಕರೇ ಗಮನಿಸಿ : ರಾಜ್ಯದ ವಸತಿ ಶಾಲೆಗಳಲ್ಲಿ 6 ನೇ ತರಗತಿ ಪ್ರವೇಶಾತಿ ಪ್ರಕ್ರಿಯೆ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ರಾಜ್ಯದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ /ಅಟಲ್ ಬಿಹಾರಿ ವಾಜಪೇಯಿ/ಶ್ರೀಮತಿ ಇಂದಿರಾ ಗಾಂಧಿ/ ಡಾ।। ಬಿ.ಆರ್. ಅಂಬೇಡ್ಕರ್/ ಮಾಸ್ತಿ ವೆಂಕಟೇಶ ಅಯ್ಯಂಗರ್/ ಸಂಗೊಳ್ಳಿ ರಾಯಣ್ಣ, ಕವಿರನ್ನ / ಗಾಂಧಿತತ್ವ / ಶ್ರೀ ನಾರಾಯಣ ಗುರು / ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಗಳಿಗೆ 2025-26 ನೇ ಸಾಲಿನ 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಕೆ. ಪ್ರವೇಶ ಪರೀಕ್ಷೆ ಮತ್ತು ದಾಖಲಾತಿಯ ಬಗ್ಗೆ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ .

ಅಭ್ಯರ್ಥಿಯು ರಾಜ್ಯದಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ಯಾವುದೇ ವಸತಿ ಶಾಲೆ ಕಾಲೇಜಿನಿಂದ ಅರ್ಜಿಯನ್ನು ಸಲ್ಲಿಸತಕ್ಕದ್ದು.2. ಅಭ್ಯರ್ಥಿಯು ಮೊದಲು ತನ್ನ SATS ಸಂಖ್ಯೆಯನ್ನು ತಾನು ಓದುತ್ತಿರುವ ಶಾಲೆಯಿಂದ ಪಡೆದು ನಂತರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ಯಾವುದೇ ವಸತಿ ಶಾಲೆಯ ಮೂಲಕ ಅರ್ಜಿಯನ್ನು ಸಲ್ಲಿಸತಕ್ಕದ್ದು.

3. ថ សំ https://cetonline.karnataka.gov.in/kea/ ಲಿಂಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. https://kreis.karnataka.gov.in
4. ಅಭ್ಯರ್ಥಿಯು ತನ್ನ SATS ಸಂಖ್ಯೆಯನ್ನು ನಮೂದಿಸಬೇಕು. ನಂತರ ತನ್ನ ಎಲ್ಲಾ ವಿವರಗಳನ್ನು ಕಂಪ್ಯೂಟರ್ ಪರದೆಯ ಮೇಲೆ ನೋಡಲು ಅವಕಾಶವಿರುತ್ತದೆ.
5. ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಲಿಂಗ ಇತ್ಯಾದಿಗಳನ್ನು ನೋಡಬಹುದು. ಇವುಗಳಲ್ಲಿ ಏನಾದರೂ ವ್ಯತ್ಯಾಸವಿದ್ದಲ್ಲಿ ತಿದ್ದುಪಡಿ ಮಾಡಿಕೊಂಡು ನಂತರ ಅರ್ಜಿ ಸಲ್ಲಿಸಲು ಸೂಚಿಸಿದೆ.
6. ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಲ್ಲಿಸತಕ್ಕದ್ದು. ಇಲ್ಲದಿದ್ದಲ್ಲಿ ಅಭ್ಯರ್ಥಿಯನ್ನು ಸಾಮಾನ್ಯ ವರ್ಗದ ಅಭ್ಯರ್ಥಿ ಎಂದು ಪರಿಗಣಿಸಲಾಗುವುದು.
7. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪರೀಕ್ಷೆ ಮತ್ತು ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ರವಾನಿಸಬೇಕಾಗಿರುವುದರಿಂದ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.
8. 2025-26 ನೇ ಸಾಲಿನಿಂದ ವಸತಿ ಶಾಲೆಗಳ 6 ನೇ ಒಟ್ಟು 41500 ಸ್ಥಾನಗಳಲ್ಲಿ ಶೇ.50% ಸ್ಥಾನಗಳನ್ನು ಅಂದರೆ 20750 ಸ್ನಾನಗಳನ್ನು ಪ್ರವೇಶ ಪರೀಕ್ಷೆ ಮೂಲಕ ಹಂಚಿಕೆ ಮಾಡಲಾಗುವುದು.
9. ವಿಶೇಷ ವರ್ಗಗಳ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ ದಾಖಲಾತಿಗೆ ಒಟ್ಟು 41500 ಸ್ಥಾನಗಳಲ್ಲಿ ಶೇ.50% ಸ್ನಾನಗಳನ್ನು ಅಂದರೆ 20750 ಸ್ಥಾನಗಳನ್ನು ಮೀಸಲಿಟ್ಟು ಪ್ರವೇಶ ಪರೀಕ್ಷೆ ಇಲ್ಲದೇ ನೇರ ದಾಖಲಾತಿ ಅವಕಾಶವನ್ನು ಕಲ್ಪಿಸಲಾಗಿದೆ ವಿಶೇಷ ವರ್ಗಗಳಿಗೆ ಸೇರಿದವರಾಗಿದ್ದಲ್ಲಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಿಂದ ಪಡೆದ ಮೂಲ ದಾಖಲೆಗಳನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಶಾಲೆಯ ಪ್ರಾಂಶುಪಾಲರಿಗೆ ತೋರಿಸಬೇಕು ಮತ್ತು ಅವುಗಳ ಒಂದು ನಕಲು ಪ್ರತಿಯನ್ನು ಸಲ್ಲಿಸಬೇಕು.
10. ವಸತಿ ಶಾಲೆಗಳ ಆಯ್ಕೆಯನ್ನು ಆದ್ಯತಾ ಕ್ರಮದಲ್ಲಿ ನಮೂದಿಸುವ ಕುರಿತು ವಸತಿ ಶಾಲೆ/ಕಾಲೇಜುಗಳ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ಯಾವ ಶಾಲೆಗಳಲ್ಲಿ ದಾಖಲಾತಿ ಬಯಸುತ್ತಾರೋ, ಅಂತಹ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಆಯಾ ತಾಲ್ಲೂಕಿನ ಸ್ಥಳೀಯ ಅಭ್ಯರ್ಥಿಗಳಿಗೆ ಶೇ.75 ಸ್ಥಾನಗಳನ್ನು ಹಂಚಿಕೆ ಮಾಡಲಾಗುವುದು. ಆದ್ಯತಾ ಕ್ರಮದಲ್ಲಿ ದಾಖಲಿಸುವ ಶಾಲೆಗಳನ್ನು ಮಾತ್ರ ಹಂಚಿಕೆಗೆ ಪರಿಗಣಿಸಲಾಗುವುದು. ಆದುದರಿಂದ ಅಭ್ಯರ್ಥಿಗಳು ತಮ್ಮ ಸೀಟು ಹಂಚಿಕೆ ಅವಕಾಶವನ್ನು ಹೆಚ್ಚಿಸಿಕೊಳ್ಳಲು ತಮ್ಮ ತಾಲ್ಲೂಕು/ ಜಿಲ್ಲೆಯಲ್ಲಿರುವ KREIS ನ ಎಲ್ಲಾ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ನಮೂದಿಸತಕ್ಕದ್ದು ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಮೆರಿಟ್, ಮೀಸಲಾತಿ ಹಾಗೂ ಅಭ್ಯರ್ಥಿಗಳು ಪ್ರವೇಶಾತಿಗಾಗಿ ನಮೂದಿಸಿರುವ ಶಾಲೆಗಳ ಆದ್ಯತಾ ಕ್ರಮದ ಆಧಾರದ ಮೇಲೆ Computerised Auto Selection ಮೂಲಕ ಸೀಟು ಹಂಚಿಕೆಯನ್ನು ಮಾಡಲಾಗುವುದು.

ಪೋಷಕರ ಗಮನಕ್ಕೆ: ಮೇಲ್ಕಂಡ ಅಂಶಗಳನ್ನು ಗಮನಿಸಿ ಅಭ್ಯರ್ಥಿಗಳ ಪೋಷಕರು ತಮ್ಮ ತಾಲ್ಲೂಕು/ ಜಿಲ್ಲೆಯಲ್ಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ಶಾಲೆಗಳ ವಿವರಗಳನ್ನು ಪಡೆದುಕೊಂಡು, ತಮ್ಮ ಮೀಸಲಾತಿಗೆ ಸೀಟುಗಳ ಲಭ್ಯತೆಯನ್ನು ಪರಿಗಣಿಸಿ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು ಎಂಬುದನ್ನು ತೀರ್ಮಾನಿಸಿ. ಅಧ್ಯತಾ ಕ್ರಮದಲ್ಲಿ ನಮೂದಿಸಬೇಕು. ಆದ್ದರಿಂದ ಶಾಲೆಗಳನ್ನು ದಾಖಲಿಸುವ ಮೊದಲು ಒಂದು ಹಾಳೆಯಲ್ಲಿ ಬರೆದುಕೊಂಡು ವಿಚಾರ ಮಾಡಿ ನಂತರ ನಮೂದಿಸುವುದು ಸೂಕ್ತ ಅರ್ಜಿ ಸಲ್ಲಿಸಿದ ನಂತರ ಪೋಷಕರು ತಮ್ಮ ಮಗುವಿನ ಎಲ್ಲಾ ವಿವರಗಳು ಸರಿಯಾಗಿ ನಮೂದಾಗಿರುವ ಬಗ್ಗೆ, ಖಚಿತ ಪಡಿಸಿಕೊಂಡು ಸ್ವೀಕೃತಿಯನ್ನು ವಸತಿ ಶಾಲೆ/ಕಾಲೇಜು ಪ್ರಾಂಶುಪಾಲರಿಂದ ಪಡೆಯತಕ್ಕದ್ದು ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಲು ಮತ್ತೊಮ್ಮೆ ಅವಕಾಶ ನೀಡಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...