ಬೆಂಗಳೂರು : ಹಿರಿಯ ಸ್ಯಾಂಡಲ್ ವುಡ್ ನಟ ‘ಸರಿಗಮ ವಿಜಿ’ ಇಂದು ವಿಧಿವಶರಾಗಿದ್ದು, ನಾಳೆ ಚಾಮರಾಜಪೇಟೆಯ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸರಿಗಮ ವಿಜಿ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಾಳೆ ಚಾಮರಾಜಪೇಟೆಯಲ್ಲಿ ಸರಿಗಮ ವಿಜಿ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಸರಿಗಮ ವಿಜಿ’ ಅವರು ಮದುವೆ ಮಾಡಿ ನೋಡು (1965) ಬೆಳುವಲದ ಮಡಿಲಲ್ಲಿ (1975) ಕಪ್ಪು ಕೋಲ (1980)…ಭೀಮಾ (ಆರ್. ವಿಜಯ್ಕುಮಾರ್ ಎಂದು ಮನ್ನಣೆ)ಪ್ರತಾಪ್ (1990)…ಸೂರಿ, ಮನ ಮೆಚ್ಚಿಡಾ ಸೊಸೆ (1992), ಕೆಂಪಯ್ಯ IPS (1993), ಚಿನ್ನದ ಪದಕ (1994), ಜಗತ್ ಕಿಲಾಡಿ (1998) ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.