ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಹಾಡಹಗಲೇ ಪತ್ನಿಯಯನ್ನು ಪತಿ ಅಪಹರಿಸಿದ ಘಟನೆ ನಡೆದಿದೆ.
ಪತ್ನಿ ಆರುಂಧತಿಯನ್ನು ಪತಿ ಕಾರ್ತಿಕ್ ಅಪಹರಣ ಮಾಡಿದ ಆರೋಪ ಕೇಳಿಬಂದಿದೆ. ಪತಿಯ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿರುವ ಅರುಂಧತಿ ಅತ್ತೆಯ ಮನೆಯಲ್ಲಿ ಇದ್ದರು. ದಿಡಗೂರು ಗ್ರಾಮದ ಅತ್ತೆ ಮನೆಯಲ್ಲಿದ್ದಾಗ ಅವರನ್ನು ಅಪಹರಿಸಲಾಗಿದೆ. ಅಪಹರಣದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.