ಬೆಂಗಳೂರು: ಬಿಎಂಟಿಸಿ ಬಸ್ ಚಾಲಕ ಕಂ ಕಂಡಕ್ಟರ್ ಓರ್ವ ಯುವತಿಯನ್ನು ನಂಬಿಸಿ ಕೈಕೊಟ್ಟ ಘಟನೆ ಬೆಳಕಿಗೆ ಬಂದಿದೆ. ಅದಾಗಲೇ ಒಂದು ವಿವಾಹವಾಗಿ ಮಕ್ಕಳನ್ನು ಹೊಂದಿದ್ದ ಕಂಡಕ್ಟರ್ ಪ್ರೇಮಪಾಶಕ್ಕೆ ಸಿಲುಕಿದ ಯುವತಿ ಗಂಭಿಣಿಯಾದ ಬಳಿಕ ಆತನ ಅಸಲಿ ಮುಖವಾಡ ಬಯಲಾಗಿದೆ.
ಎಂಎಸ್ ಪಾಳ್ಯದಿಂದ ಯಲಹಂಕ ತೆರಳುವ ಬಿಎಂಟಿಸಿ ಬಸ್ ಚಾಲಕ ಕಂ ಕಂಡಕ್ಟರ್ ಆಗಿದ್ದ ಮಂಜುನಾಥ್ ಟಿಕೆಟ್ ಕೊಡುವ ನೆಪದಲ್ಲಿ ಯುವತಿಗೆ ಪರಿಚಯನಾಗಿದ್ದಾನೆ. ಪ್ರತಿದಿನ ಯುವತಿ ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹಿನ್ನೆಲೆಯಲ್ಲಿ ಪರಿಚಯ ಪ್ರೇಮಕ್ಕೆ ತಿರುಗಿದೆ. ಕಂಡಕ್ಟರ್ ಮಂಜುನಾಥ್ ತನಗೆ ಮದುವೆಯಾಗಿ ಮಕ್ಕಳಿದ್ದಾರೆ ಎಂಬುದನ್ನೂ ಮರೆತಿದ್ದಾನೆ.
ಯುವತಿಯ ಫೋನ್ ನಂಬರ್ ಪಡೆದು ಸಲುಗೆ ಬೆಳೆಸಿಕೊಂಡಿದ್ದೂ ಅಲ್ಲದೇ ಇಬ್ಬರೂ ಊರಿಂದ ಊರಿಗೆ ಟ್ರಿಪ್, ಜಾಲಿ ರೈಡ್ ಮಾಡಿದ್ದಾರೆ. ಯುವತಿ ತನಗೆ ಒಂದು ಮದುವೆಯಾಗಿ ಡಿವೋರ್ಸ್ ಆಗಿರುವ ವಿಚಾರವನ್ನು ಕಂಡಕ್ಟರ್ ಗೆ ಹೇಳಿದ್ದಳು. ನಿನಗೆ ಬಳು ಕೊಡುತ್ತೇನೆ ಎಂದು ಆತ ಮದುವೆಯಾಗಿದ್ದಾನೆ. ದೇವಸ್ಥಾನವೊಂದರಲ್ಲಿ ಇಬ್ಬರೂ ಮದುವೆಯಾಗಿದ್ದಾರೆ. ಮದುವೆಯಾದ ಮೂರು ತಿಂಗಳು ಕಳೆಯುತ್ತಿದ್ದಂತೆ ಯುವತಿ ಗರ್ಭಿಣಿಯಾಗಿದ್ದಾಳೆ. ಇದೇ ವೇಳೆ ಕಂಡಕ್ಟರ್ ನ ಮುಖವಾಡವೂ ಕಳಚಿ ಬೀಳಲಾರಂಭಿಸಿದೆ.
ಕಂಡಕ್ಟರ್ ಮಂಜುನಾಥ್ ಗೆ ನೆಲಮಂಗಲದಲ್ಲಿ ಪತ್ನಿ ಹಾಗು ಮಕ್ಕಳಿದ್ದು, ಅಲ್ಲಿಯೂ ಆತ ಸಂಸಾರ ಮಾಡುತ್ತಿದ್ದಾನೆ. ವಿಶಯ ಮುಚ್ಚಿಟ್ಟು ತನ್ನನ್ನು ಮದುವೆಯಾಗಿದ್ದ ಕಂಡಕ್ಟರ್ ಮೋಸದಾಟಕ್ಕೆ ಬಲಿಯಾದ ಯುವತಿ ಈಗ ಕಮಿಷನರ್ ಕಚೇರಿ ಮೆಟ್ಟಿಲೇರಿದ್ದು, ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದಾಳೆ. ಮಹಿಳಾ ಸಹಾಯವಾಣಿಗೂ ಕರೆ ಮಾಡಿ, ಸಹಾಯ ಮಾಡುವಂತೆ ಗೋಗರೆದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.