alex Certify ಜ.15 ರಂದು ತಜ್ಞ ವೈದ್ಯರು-ಅರೆ ವೈದ್ಯಕೀಯ ಸಿಬ್ಬಂದಿಗಳ ನೇಮಕಕ್ಕೆ ನೇರ ಸಂದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ.15 ರಂದು ತಜ್ಞ ವೈದ್ಯರು-ಅರೆ ವೈದ್ಯಕೀಯ ಸಿಬ್ಬಂದಿಗಳ ನೇಮಕಕ್ಕೆ ನೇರ ಸಂದರ್ಶನ

ಶಿವಮೊಗ್ಗ : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಸರ್ವೇಕ್ಷೇಣಾಧಿಕಾರಿಗಳ ಅಧೀನದಲ್ಲಿ ಬರುವ ವಿವಿಧ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳು ನೇರ ಸಂದರ್ಶನ ಏರ್ಪಡಿಸಲಾಗಿದೆ.

ಎನ್‌ಪಿಹೆಚ್‌ಸಿಇ ಕಾರ್ಯಕ್ರಮದಡಿ ತಜ್ಞವೈದ್ಯರು(ಎಂ.ಡಿ. ಇಂಟರ್ನಲ್ ಮೆಡಿಸಿನ್/ಜಿಎಂ) ಹುದ್ದೆ 01, ವಿದ್ಯಾರ್ಹತೆ ಎಂಬಿಬಿಎಸ್, ಎಂ.ಡಿ, ಸ್ಪೆಷಲಿಸ್ಟ್ ಹುದ್ದೆಯಲ್ಲಿ 2 ವರ್ಷ ಕಾರ್ಯ ನಿರ್ವಹಿಸಿರಬೇಕು.
ಸಿಪಿಹೆಚ್‌ಸಿ-ಯುಹೆಚ್‌ಸಿ ಕಾರ್ಯಕ್ರಮದಡಿ ಜಿಲ್ಲಾ ಆರೋಗ್ಯ ಮತ್ತು ಕ್ಷೇಮಕೇಂದ್ರ ಸಂಯೋಜಕರ ಹುದ್ದೆ 01, ವಿದ್ಯಾರ್ಹತೆ ಬಿಡಿಎಸ್/ಬಿಎಎಂಎಸ್/ಬಿಯುಎAಎಸ್/ಬಿಹೆಚ್‌ಎAಎಸ್/ಬಿವೈಎನ್‌ಎಸ್/ಎAಎಸ್‌ಸಿ ನರ್ಸಿಂಗ್/ಎAಎಸ್‌ಸಿ ಲೈಫ್ ಸೈನ್ಸ್/ಬಿಎಸ್‌ಸಿ ನರ್ಸಿಂಗ್ ಎಲ್ಲ ಪದವಿಯೊಂದಿಗೆ ಎಂಪಿಹೆಚ್ ಅಥವಾ ಎಂಬಿಎ ಕಡ್ಡಾಯವಾಗಿ ಪೂರ್ಣಗೊಂಡಿರಬೇಕು.

ಐಡಿಎಸ್‌ಪಿ ಕಾರ್ಯಕ್ರಮದಡಿ ಜಿಲ್ಲಾ ಎಪಿಡೆಮಿಯಾಲಜಿಸ್ಟ್ ಹುದ್ದೆ 01, ವಿದ್ಯಾರ್ಹತೆ ಮೆಡಿಕಲ್ ಗ್ರಾಜುಯೇಟ್, ಎಂಬಿಬಿಎಸ್ ಜೊತೆಗೆ ಪೋಸ್ಟ್ ಗ್ರಾಜುಯೇಟ್ ಪದವಿ/ಡಿಪ್ಲೊಮ ಇನ್ ಪ್ರಿವೆಂಟಿವ್ ಅಂಡ್ ಸೋಷಿಯಲ್ ಮೆಡಿಸಿನ್/ಪಬ್ಲಿಕ್ ಹೆಲ್ತ್ ಅಥವಾ ಎಪಿಡೆಮಿಯಾಲಜಿ(ಎಂ.ಡಿ, ಎಂಪಿಹೆಚ್, ಡಿಪಿಹೆಚ್, ಎಂಎಇ ಇತ್ಯಾದಿ) ಅಥವಾ ಯಾವುದೇ ಮೆಡಿಕಲ್ ಗ್ರಾಜುಯೇಟ್(ಎಂಬಿಬಿಎಸ್ ಹೊರತುಪಡಿಸಿ) ಜೊತೆಗೆ ಎಂಪಿಹೆಚ್ ಜೊತೆಗೆ ಕನಿಷ್ಟ ಒಂದು ವರ್ಷದ ಅನುಭವ ಪಬ್ಲಿಕ್ ಹೆಲ್ತ್ನಲ್ಲಿ ಅನುಭವ ಉಳ್ಳವರಿಗೆ ಆದ್ಯತೆ ನೀಡಲಾಗುವುದು ಅಥವಾ ಎಂಎಸ್‌ಸಿ ಇನ್ ಲೈಫ್ ಸೈನ್ಸ್ ಜೊತೆಗೆ 2 ವರ್ಷದ ಅನುಭವ ಉಳ್ಳವರಿಗೆ ಆದ್ಯತೆ ನೀಡಲಾಗುವುದು.

ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಎನ್‌ಸಿಡಿ ಘಟಕ, ಮೆಗ್ಗಾನ್ ಆಸ್ಪತ್ರೆ ಆವರಣ, ತುಂಗಾ ವಿದ್ಯಾರ್ಥಿನಿಯರ ವಸತಿ ನಿಲಯದ ಎದುರು, ಶಿವಮೊಗ್ಗ ಇಲ್ಲಿ ದಿ: 15-01-2025 ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಬೆಳಿಗ್ಗೆ 10.30 ರಿಂದ ಸಂಜೆ 4 ಗಂಟೆವರೆಗೆ ಮೂಲಪ್ರತಿ ಮತ್ತು ಛಾಯಾಪ್ರತಿಗಳೊಂದಿಗೆ ನೇರಸಂದರ್ಶನಕ್ಕೆ ಹಾಜರಾಗಬಹುದು.

ಈ ನೇಮಕಾತಿಯು ಎನ್‌ಹೆಚ್‌ಎಂ ನಿಯಮಾವಳಿ, ಷರತ್ತು ಮತ್ತು ನಿಬಂಧನೆಗಳಿಗೆ ಮತ್ತು ಆಯ್ಕೆ ಸಮಿತಿಯ ತೀರ್ಮಾನಕ್ಕೆ ಒಳಪಟ್ಟಿರುತ್ತದೆ. ಎನ್‌ಸಿಡಿ ಕ್ಲಿನಿಕ್ ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇದ್ದಲ್ಲಿ ಪ್ರತಿ ತಿಂಗಳ 3ನೇ ಸೋಮವಾರದಂದು ವೈದ್ಯರ ಮತ್ತು ತಜ್ಞ ವೈದ್ಯರ ಹುದ್ದೆಗೆ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕರಿಗಳ ಕಚೇರಿಯಿಂದ ಪಡೆಯಬಹುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...