ಗಿರೀಶ್ ಮೂಲಿಮನಿ ನಿರ್ದೇಶನದ ಪೃಥ್ವಿ ಅಂಬಾರ್ ಹಾಗೂ ಪ್ರಮೋದ್ ಒಟ್ಟಾಗಿ ಅಭಿನಯಿಸಿರುವ ‘ಭುವನಂ ಗಗನಂ’ ಚಿತ್ರದ ”i got this feeling” ಎಂಬ ಹಾಡು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಹಾಡಿಗೆ ಗುಮ್ಮಿನೇನಿ ವಿಜಯ್ ಧ್ವನಿಯಾಗುವ ಮೂಲಕ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಅನಿರುದ್ಧ ಶಾಸ್ತ್ರಿ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರವನ್ನು ಎಸ್‌ವಿಸಿ ಫಿಲಂಸ್ ಬ್ಯಾನರ್ ನಲ್ಲಿ ಎಂ ಮುನೇಗೌಡ ನಿರ್ಮಾಣ ಮಾಡಿದ್ದು, ಪೃಥ್ವಿ ಅಂಬಾರ್, ಪ್ರಮೋದ್, ರೇಚೆಲ್ ಡೇವಿಡ್, ಪೊನ್ನು ಅಶ್ವತಿ, ಶರತ್ ಲೋಹಿತಾಶ್ವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುನೀಲ್ ಕಶ್ಯಪ್ ಸಂಕಲನ, ಡಾ ಕೆ ರವಿವರ್ಮ, ಥ್ರಿಲ್ಲರ್ ಮಂಜು, ಅರ್ಜುನ್ ರಾಜ್, ನರಸಿಂಹ ಅವರ ಸಾಹಸ ನಿರ್ದೇಶನ, ಉದಯ್ ಲೀಲಾ ಛಾಯಾಗ್ರಹಣವಿದೆ.