ನವದೆಹಲಿ: ಮಹಾ ಕುಂಭಮೇಳಕ್ಕಾಗಿ ಭಕ್ತರನ್ನು ಪ್ರಯಾಗ್ರಾಜ್ ಗೆ ಕರೆದೊಯ್ಯುತ್ತಿದ್ದ ತಪತಿ ಗಂಗಾ ಎಕ್ಸ್ಪ್ರೆಸ್ ರೈಲಿನ ಮೇಲೆ ಮಹಾರಾಷ್ಟ್ರದ ಜಲ್ಗಾಂವ್ ನಿಲ್ದಾಣದ ಬಳಿ ಭಾನುವಾರ ಕಲ್ಲು ತೂರಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲವಾದರೂ, ಬಿ 6 ಬೋಗಿಯ ಕಿಟಕಿಗೆ ಹಾನಿಯಾಗಿದೆ ಎಂದು ಅವರು ಹೇಳಿದರು.
ಈ ಸಂಬಂಧ ರೈಲ್ವೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಸೂರತ್-ಛಾಪ್ರಾ ತಪತಿ ಗಂಗಾ ಎಕ್ಸ್ಪ್ರೆಸ್ ರೈಲಿನಲ್ಲಿ ಕೆಲವು ಪ್ರಯಾಣಿಕರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿದೆ.
ಕುಂಭಮೇಳಕ್ಕಾಗಿ ಪ್ರಯಾಗ್ರಾಜ್ಗೆ ತೆರಳುತ್ತಿದ್ದ ಪ್ರಯಾಣಿಕರ ಪ್ರಕಾರ, ಜಲ್ಗಾಂವ್ ನಿಲ್ದಾಣದಿಂದ ಹೊರಟ ಎರಡು ಮೂರು ಕಿಲೋಮೀಟರ್ ನಂತರ ರೈಲಿನ ಮೇಲೆ ಕಲ್ಲು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
A train carrying pilgrims going to Maha Kumbh, Prayagraj was attacked by radicals in Jalgaon, Maharashtra. Coaches of Tapti Ganga Express were damaged due to stone pelting.
Earlier railway track on Varanasi-Sultanpur route was damaged by radicals on Saturday. pic.twitter.com/HsQEuJiN2f
— Baba Banaras™ (@RealBababanaras) January 13, 2025