alex Certify ಅಲ್ಲು ಅರ್ಜುನ್ ನಟನೆಯ ‘ಅಲಾ ವೈಕುಂಠಪುರಮುಲೋ’ ಚಿತ್ರ ಬಿಡುಗಡೆಯಾಗಿ ಇಂದಿಗೆ ಐದು ವರ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲ್ಲು ಅರ್ಜುನ್ ನಟನೆಯ ‘ಅಲಾ ವೈಕುಂಠಪುರಮುಲೋ’ ಚಿತ್ರ ಬಿಡುಗಡೆಯಾಗಿ ಇಂದಿಗೆ ಐದು ವರ್ಷ

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ‘ಅಲಾ ವೈಕುಂಠಪುರಮುಲೋ’  2020 ಜನವರಿ 12ರಂದು  ತೆರೆಕಂಡಿತ್ತು. ಕೇವಲ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ ಹೊಸ ದಾಖಲೆ ಬರೆಯುವ ಮೂಲಕ ಪ್ರೇಕ್ಷಕರ  ಗಮನ ಸೆಳೆಯುವವಲ್ಲಿ ಯಶಸ್ವಿಯಾಗಿತ್ತು. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಐದು ವರ್ಷಗಳಾಗಿದ್ದು, ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ಅಭಿನಯಿಸಿದ್ದು, ಜಯರಾಮ್, ಮುರಳಿ ಶರ್ಮಾ, ಸುಶಾಂತ್, ಸುನಿಲ್, ನವದೀಪ್, ಹರ್ಷವರ್ಧನ್, ನಿವೇತಾ ಪೇತುರಾಜ್, ರಾಜೇಂದ್ರ ಪ್ರಸಾದ್, ಸಮುದ್ರಕನಿ, ವೆನ್ನೆಲ ಕಿಶೋರ್, ಅಜಯ್, ಬ್ರಹ್ಮಾಜಿ, ಉಳಿದ  ಪಾತ್ರವರ್ಗದಲ್ಲಿದ್ದಾರೆ. ಗೀತಾ ಆರ್ಟ್ಸ್,  ಹರಿಕಾ & ಹಾಸನ್ ಕ್ರಿಯೇಷನ್ಸ್, ಬ್ಯಾನರ್ ನಲ್ಲಿ ಅಲ್ಲು ಅರವಿಂದ್ ಹಾಗೂ ಎಸ್ ರಾಧಾಕೃಷ್ಣ ನಿರ್ಮಾಣ ಮಾಡಿದ್ದಾರೆ. ನವೀನ್ ನೂಲಿ ಸಂಕಲನ, ಪಿ ಎಸ್ ವಿನೋದ್ ಛಾಯಾಗ್ರಹಣವಿದೆ. ಇನ್ನುಳಿದಂತೆ ಥಮನ್  ಎಸ್. ಸಂಗೀತ ಸಂಯೋಜನೆ ನೀಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...