ಬಾಗಲಕೋಟೆ: ಬಾಲಿವುಡ್ ಬಾದ್ ಶಾ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಯುವಕ 50 ಲಕ್ಷ ರೂಪಾಯಿ ಗೆದ್ದು ಸಂಭ್ರಮಿಸಿದ್ದಾರೆ.
ಮಹಾಲಿಂಗಪುರದ ರಂಜಾನ್ ಪೀರಜಾದೆ ಎಂಬ ಯುವಕ 50 ಲಕ್ಷ ರೂಪಾಯಿ ಗೆದ್ದಿದ್ದಾರೆ. 1 ಕೋಟಿ ರೂಪಾಯಿ ಪ್ರಶ್ನೆಗಳಿಗೆ ಉತ್ತರಿಸಲು ಹಿಂದೆ ಸರಿದ ಪರಿಣಾಮ ರಂಜಾನ್ ಪೀರಜಾದೆ, 50 ಲಕ್ಷ ರೂಪಾಯಿಗೆ ತೃಪ್ತಿಪಟ್ಟುಕೊಂಡಿದ್ದು, ಅಮಿತ್ ಬಚ್ಚನ್ ಅವರಿಂದ ಚೆಕ್ ಪಡೆದು ಕಾರ್ಯಕ್ರಮದಿಂದ ಹಿಂದಿರುಗಿದ್ದಾರೆ.
ಬಡ ಕುಟುಂಬದಲ್ಲಿ ಜನಿಸಿರುವ ರಂಜಾನ್ ಅವರ ತಾಯಿ ಮನೆ ಕೆಲಸ ಮಾಡುತ್ತಾರೆ. ತಂದೆ ಮಲಿಕ್ ಗ್ಯಾಸ್ ವೆಲ್ಡರ್ ಆಗಿ ಕೆಲಸ ಮಾಡುತ್ತಾರೆ. ಅಲ್ಪಸ್ವಲ್ಪ ಶಿಕ್ಷಣ ಪಡೆದು ತಂದೆಯೊಂದಿಗೆ ಕೆಲಸ ಮಾಡುತ್ತ ವಾಚ್ ಮೆನ್ ಆಗಿಯೂ ಕೆಲಸ ಮಾಡುತ್ತಾ ಶಿಕ್ಷಣ ಮುಂದುವೆರೆಸಿದ್ದು, ಮಹಾಲಿಂಗಪುರದ ಸಿಪಿ ಸಂಸ್ಥೆಯ ಕೆ.ಎಲ್.ಇ ಕಾಲೇಜಿನಲ್ಲಿ ರಂಜಾನ್ ಪದವಿ ವಿದ್ಯಾಭ್ಯಾಸ ಮುಗಿಸಿದ್ದಾರೆ ಸದ್ಯ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸಿದ್ದಾರೆ.
ರಂಜಾನ್ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಭಾಗಿಯಾದ ಕಾರ್ಯಕ್ರಮ ಜ.13ರಂದು ರಾತ್ರಿ 9ಗಂಟೆಗೆ ಸೋನಿ ವಾಹಿನಿಯಲ್ಲಿ ಎಪಿಸೋಡ್ ಪ್ರಸಾರವಾಗಲಿದೆ.