ರಾಂಚಿ: ಶಾಲೆಯ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿರುವ ಘಟನೆ ಜಾರ್ಝಂಡ್ ನ ಧನ್ ಬಾದ್ ನಲ್ಲಿ ನಡೆದಿದೆ.
ಶಾಲೆಗೆ ಬಂದ ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿರುವ ಪ್ರಾಂಶುಪಾಲ, ಬ್ಲೇಸರ್ ನಲ್ಲೇ ಅವರನ್ನು ಮನೆಗೆ ಕಳುಹಿಸಿದ್ದಾರೆ. ಪ್ರಾಂಶುಪಾಲರ ಈ ನಡೆಗೆ ಕೆಂದಾಮಂಡಲರಾಗಿರುವ ಪೋಷಕರು ಶಾಲೆಗೆ ದೌಡಾಯಿಸಿದ್ದು, ಪ್ರಾಂಸ್ಗುಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿಯರು ತಮ್ಮ ಶರ್ಟ್ ಗಳ ಮೇಲೆ ಪೆನ್ ನಿಂದ ಬರೆದುಕೊಂಡಿದ್ದರು. ಇದರಿಂದ ಕೋಪಗೊಂಡ ಪ್ರಾಂಸ್ಗುಪಾಲ ಶರ್ಟ್ ಬಿಚ್ಚಿಸಿ ಬರಿ ಬ್ಲೇಸರ್ ನಲ್ಲೇ ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸಿದ್ದಾರೆ.
80 ವಿದ್ಯಾರ್ಥಿನಿಯರು ಶಾಲೆಯಲ್ಲಿ ಪೆನ್ ಡೇ ಆಚರಿಸಿ ಶರ್ಟ್ ಮೇಲೆ ಬರೆದುಕೊಂಡಿದ್ದರು. ಇದೇ ಕಾರಣಕ್ಕೆ ಪ್ರಾಂಶುಪಾಲರು ಗರಂ ಆಗಿ ಶರ್ಟ್ ಬಿಚ್ಚಿಸಿದ್ದಾರೆ ಎನ್ನಲಾಗಿದೆ. ಪ್ರಾಂಶುಪಾಲರ ಈ ನಡೆ ಸರಿಯಲ್ಲ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಪೋಷಕರು, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.