2009ರಲ್ಲಿ ತೆರೆಕಂಡಿದ್ದ ನವರಸ ನಾಯಕ ಜಗ್ಗೇಶ್ ಅಭಿನಯದ ಗುರುಪ್ರಸಾದ್ ನಿರ್ದೇಶನದ ‘ಎದ್ದೇಳು ಮಂಜುನಾಥ’ ಚಿತ್ರ ತನ್ನ ಹಾಸ್ಯ ಮತ್ತು ಎಮೋಷನ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುವುದಲ್ಲದೆ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಇದರ ಮುಂದುವರೆದ ಭಾಗ ‘ಎದ್ದೇಳು ಮಂಜುನಾಥ2’ ಮುಂದಿನ ತಿಂಗಳು ಫೆಬ್ರವರಿ 21ಕ್ಕೆ ತೆರೆ ಮೇಲೆ ಬರಲು ಸಜ್ಜಾಗಿದೆ.
ಈ ಚಿತ್ರವನ್ನು ಗುರುಪ್ರಸಾದ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿದ್ದುಇದರ ‘ಕಿತ್ತೋದ ಪ್ರೇಮ’ ಎಂಬ ವಿಡಿಯೋ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ನವೀನ್ ಸಜ್ಜು ಧ್ವನಿಯಾಗಿದ್ದು, ಜೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಗುರುಪ್ರಸಾದ್ ಅವರೇ ಸಾಹಿತ್ಯ ಬರೆದಿದ್ದಾರೆ. .
ಈ ಚಿತ್ರವನ್ನು ರಾಮ್ ಮೂವೀಸ್, ಗುರುಪ್ರಸಾದ್ ಇಂಕ್, ಫ್ರೆಂಡ್ಸ್ ಫೋರಮ್ ಬ್ಯಾನರ್ ನಲ್ಲಿ ಮೈಸೂರು ರಮೇಶ್ ನಿರ್ಮಾಣ ಮಾಡಿದ್ದು, ಗುರುಪ್ರಸಾದ್ ಸೇರಿದಂತೆ ರಚಿತಾ ಮಹಾಲಕ್ಷ್ಮಿ, ಶರತ್ ಲೋಹಿತಾಶ್ವ, ಚೈತ್ರ ಆಚಾರ್, ವಾಗೀಶ್ ಕತ್ತಿ, ರವಿ ದೀಕ್ಷಿತ್ ತೆರೆ ಹಂಚಿಕೊಂಡಿದ್ದಾರೆ. ಲಿಂಗರಾಜು ಹಾಗೂ ಉದಯ್ ಅವರ ಸಂಕಲನ ಅಶೋಕ್ ಸಾಮ್ರಾಟ್ ಛಾಯಾಗ್ರಹಣವಿದೆ. ಇದು ಗುರುಪ್ರಸಾದ್ ಅವರ ಕೊನೆಯ ಸಿನಿಮಾವಾಗಿದೆ.